ಭಾನುವಾರ, ಫೆಬ್ರವರಿ 28, 2021
31 °C
ಹಾಥರಸ್‌ ಅತ್ಯಾಚಾರ ಪ್ರಕರಣ

ಉತ್ತರ ಪ್ರದೇಶ ಸರ್ಕಾರದ ನಿಜವಾದ ಮುಖ ಬಯಲಾಗಿದೆ–ಅಖಿಲೇಶ್‌ ಯಾದವ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ‘ಹಾಥರಸ್‌ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ‍ಪ್ರದೇಶ ಸರ್ಕಾರದ ಅಸಲಿ ಉದ್ದೇಶ ಬಹಿರಂಗವಾಗಿದೆ. ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ವಿರುದ್ಧದ ಸುಳ್ಳು ಪ್ರಕರಣಗಳಲ್ಲೂ ಸರ್ಕಾರವು ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಲಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸೋಮವಾರ ತಿಳಿಸಿದರು.

ಹಾಥರಸ್‌ ಅತ್ಯಾಚಾರ ಪ್ರಕರಣದಡಿ ನಾಲ್ಕು ಮಂದಿಯ ವಿರುದ್ಧ ಸಿಬಿಐ ಅಧಿಕಾರಿಗಳು ಶುಕ್ರವಾರ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇದು ಉತ್ತರ ಪ್ರದೇಶ ಪೊಲೀಸರ ಮುಖವಾಡ ಕಳಚಿ ಹಾಕಿದೆ. ಅವರು ಈ ಪ್ರಕರಣ ಸಂಬಂಧ  ವಿಧಿವಿಜ್ಞಾನ ಪರೀಕ್ಷೆಯಲ್ಲಿ ಯಾವುದೇ ಪುರಾವೆಗಳು ದೊರತಿಲ್ಲ ಎಂದು ಹೇಳಿದ್ದರು ಎಂದು ಅವರು ಹೇಳಿದರು.

‘ಹಾಥರಸ್‌ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ಸುಳ್ಳುಗಳು ಹೇಗೆ ಬಹಿರಂಗವಾಯಿತೋ ಅದೇ ರೀತಿ ಸುಳ್ಳು ಪ್ರಕರಣದ ಬಗ್ಗೆಯೂ ಸತ್ಯ ಹೊರಬೀಳಲಿದೆ’ ಎಂದು ಯಾದವ್‌ ಟ್ವೀಟ್‌ ಮಾಡಿದ್ದಾರೆ.

‘ನಮಗೆ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆಯಿದೆ. ನಾವು ಆಜಂ ಖಾನ್‌ಗೆ ನ್ಯಾಯ ಸಿಗಲಿ ಎಂದು ಇಚ್ಛಿಸುತ್ತೇವೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಆಜಂ ಖಾನ್‌ ಅವರ ಮಗ ಅಬ್ದುಲ್ಲಾ ಅವರು ಸಲ್ಲಿಸಿದ ಜನನ ಪ್ರಮಾಣಪತ್ರ ನಕಲಿ ಎಂಬ ಆರೋಪದಡಿ ಆಜಂ ಖಾನ್‌ ಮತ್ತು ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು