ಗುರುವಾರ , ಜುಲೈ 7, 2022
23 °C

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಶೇ 53ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದಲ್ಲಿ ನಡೆದ ಮತದಾನದಲ್ಲಿ ಸಂಜೆ ಐದರವರೆಗೆ ಶೇ 53.31ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಂಜೆ ಆರರವರೆಗೆ ಮತದಾನ ನಡೆದಿದ್ದು, ಮತದಾನದ ಪ್ರಮಾಣ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ 10 ಜಿಲ್ಲೆಗಳ 5 ಕ್ಷೇತ್ರಗಳಲ್ಲಿ ಒಟ್ಟು 676 ಅಭ್ಯರ್ಥಿಗಳು ಕಣದಲ್ಲಿ ಇದ್ದರು. 2.15 ಕೋಟಿ ಅರ್ಹ ಮತದಾರರಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಜನರಷ್ಟೇ ಗುರುವಾರ ಮತದಾನ ಮಾಡಿದ್ದಾರೆ. ಮತದಾನವು ಎಲ್ಲೆಡೆ ಶಾಂತಿಯುತವಾಗಿ ನಡೆದಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಈ 57 ಕ್ಷೇತ್ರಗಳಲ್ಲಿ, ಬಿಜೆಪಿ ಅಭ್ಯರ್ಥಿಗಳು 46 ಕ್ಷೇತ್ರಗಳಲ್ಲಿ ಆರಿಸಿಬಂದಿದ್ದರು.

ಈ ಹಂತದಲ್ಲಿ ಗೋರಖಪುರ ನಗರ ಕ್ಷೇತ್ರದಲ್ಲೂ ಮತದಾನ ನಡೆದಿತ್ತು. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಸಂಜೆ 5ರ ವೇಳೆಗೆ ಗೋರಖಪುರದ ಎಲ್ಲಾ ಕ್ಷೇತ್ರಗಳಲ್ಲಿ ಶೇ 53.89ರಷ್ಟು, ಬಲರಾಮಪುರದಲ್ಲಿ ಶೇ 48.53, ಬಸ್ತಿಯಲ್ಲಿ ಶೇ 54.24, ಡಿಯೋರಾದಲ್ಲಿ ಶೇ 51.50, ಕುಶೀನಗರದಲ್ಲಿ ಶೇ 55, ಮಹಾರಾಜಗಂಜ್‌ನಲ್ಲಿ ಶೇ 57.38 ಮತ್ತು ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ
ಶೇ 59.55ರಷ್ಟು ಮತದಾನ ನಡೆದಿದೆ.

ಆರು ಹಂತವು ಪೂರ್ಣವಾಗುವುದರೊಂದಿಗೆ, ರಾಜ್ಯದ 403 ಕ್ಷೇತ್ರಗಳಲ್ಲಿ ಈಗ ಒಟ್ಟು 349 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಇನ್ನು 54 ಕ್ಷೇತ್ರಗಳಲ್ಲಿ ಮಾರ್ಚ್‌ 7ರಂದು ಅಂತಿಮ ಹಂತದ ಮತದಾನ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು