ಬುಧವಾರ, ಮೇ 25, 2022
27 °C
ಪ್ರಧಾನಿ ಹೇಳಿಕೆಗೆ ಮೌನ ಪ್ರತಿಭಟನೆ

ಉತ್ತರ ಪ್ರದೇಶ: ಎಸ್‌ಪಿ ಕಾರ್ಯಕರ್ತರಿಂದ ರಾಶಿ ರಾಶಿ ಕೆಂಪು ಟೋಪಿ ಖರೀದಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಸಮಾಜವಾದಿ ಪಕ್ಷದ ಕಾರ್ಯಕರ್ತರು ಪಕ್ಷದ ಚಿಹ್ನೆ ಇರುವ ಕೆಂಪು ಟೋಪಿಗಳನ್ನು ಭಾರಿ ಪ್ರಮಾಣದಲ್ಲಿ  ಕೊಳ್ಳುತ್ತಿದ್ದಾರೆ. ಈ ಟೋಪಿಗಳು ಬದಲಾವಣೆ ಮತ್ತು ಕ್ರಾಂತಿಯ ಸಂಕೇತ ಎಂದು ಪ್ರಚಾರ ಮಾಡುತ್ತಿದ್ದಾರೆ. ‘ಕೆಂಪು ಟೋಪಿ ಅಪಾಯದ ಎಚ್ಚರಿಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಖಂಡಿಸಲು ಎಸ್‌ಪಿ ಕಾರ್ಯಕರ್ತರು ಟೋಪಿ ಖರೀದಿ ಮಾಡುತ್ತಿದ್ದಾರೆ.

ಪಕ್ಷದ ಟೋಪಿಯನ್ನು ಧರಿಸುವ ಮೂಲಕ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ನೇತೃತ್ವದಲ್ಲಿ ಎಸ್‌ಪಿ ನಾಯಕರು ಮತ್ತು ಕಾರ್ಯಕರ್ತರು ಮೋದಿ ಹೇಳಿಕೆ ವಿರುದ್ಧ ಮೌನ ಪ್ರತಿಭಟನೆ ದಾಖಲಿಸುತ್ತಿದ್ದಾರೆ.

‘ಗ್ರಾಮಗಳು ಮತ್ತು ರಸ್ತೆಗಳಲ್ಲಿ ಪ್ರಚಾರದಲ್ಲಿ ತೊಡಗಿರುವ ಎಸ್‌ಪಿ ನಾಯಕರು ಮತ್ತು ಕಾರ್ಯಕರ್ತರು ಕೆಂಪು ಟೋಪಿ ಧರಿಸಿ ಪ್ರಚಾರ ನಡೆಸುತ್ತಿದ್ದಾರೆ. ಕೆಂಪು ಟೋಪಿ ಧರಿಸಿ ರಾಜ್ಯದಲ್ಲಿ ಸಮಾಜವಾದವನ್ನು ಮರಳಿ ತರುತ್ತೇವೆ’ ಎಂದು ಎಸ್‌ಪಿ ರಾಷ್ಟ್ರೀಯ ವಕ್ತಾರ ಸುನೀಲ್‌ ಸಿಂಗ್‌ ಸಾಜನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು