ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಾವ್ಯಾಕ್ಸ್‌ ಕೋವಿಡ್‌–19 ಲಸಿಕೆ ಉತ್ಪಾದನೆ ದುಪ್ಪಟ್ಟು

Last Updated 15 ಸೆಪ್ಟೆಂಬರ್ 2020, 18:58 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಇದೇ ಅಕ್ಟೋಬರ್‌ನಿಂದ ಮಾನವರ ಮೇಲೆ ನಾಲ್ಕನೇ ಕೋವಿಡ್‌–19 ಲಸಿಕೆ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌) ಆರಂಭವಾಗಲಿದೆ.

ಅಮೆರಿಕದ ನೋವಾವಾಕ್ಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಉತ್ಪಾದಿಸಲಿದೆ. ಉಪ್ತಾದನೆ ಪೂರ್ಣಗೊಂಡ ನಂತರ ಅಕ್ಟೋಬರ್‌ ಎರಡನೇ ವಾರದಿಂದ ಮಾನವರ ಮೇಲೆ ಪ್ರಯೋಗ ಶುರುವಾಗಲಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪ್ರಯೋಗಾಲಯ ಸಹಭಾಗಿತ್ವದಲ್ಲಿ ನಡೆಯಲಿರುವ ಕ್ಲಿನಿಕಲ್‌ ಟ್ರಯಲ್‌ಗೆಪುಣೆಯ ರಾಷ್ಟ್ರೀಯ ಏಡ್ಸ್‌ ಸಂಶೋಧನಾ ಸಂಸ್ಥೆ ಮತ್ತು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೈಜೋಡಿಸಿವೆ.

ದಕ್ಷಿಣ ಆಫ್ರಿಕಾದಲ್ಲಿ ಕಳೆದ ತಿಂಗಳಿನಿಂದ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ನಡೆಸಲಾಗುತ್ತಿದೆಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

ಕೋವಿಡ್‌–19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ಸಾರ್ಸ್‌ ಸಿಒವಿ–2 ವೈರಾಣುವಿನ ಜೀವತಂತು ಬಳಸಿ‘ನೋವಾವಾಕ್ಸ್ ಎನ್‌ವಿಎಕ್ಸ್‌–ಸಿಒವಿ2373’ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಪ್ರಾಣಿಗಳ ಮೇಲೆ ಮಾಡಲಾದ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ.

ಭಾರತದಲ್ಲಿ ಭಾರತ ಬಯೊಟೆಕ್‌ ಮತ್ತು ಕ್ಯಾಡಿಲಾ ಅಭಿವೃದ್ಧಿಪಡಿಸಿದ ಎರಡು ಲಸಿಕೆಗಳುಮೊದಲ ಹಂತದ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಈಗಾಗಲೆ ಉತ್ತಮ ಫಲಿತಾಂಶ ನೀಡಿವೆ. ಮಾನವರ ಮೇಲೆ ಪ್ರಯೋಗಿಸಲು ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಈ ಎರಡೂ ಲಸಿಕೆಗಳ ಎರಡನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ.

ಭಾರತದಲ್ಲಿ ಒಂದು ವಾರದಿಂದ ಸ್ಥಗಿತಗೊಂಡಿದ್ದ ಆಕ್ಸ್‌ಫರ್ಡ್‌ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಕೂಡ ಶೀಘ್ರದಲ್ಲಿ ಪುನಾರಂಭವಾಗಲಿದೆ. ಈಗಾಗಲೇ ನೂರು ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ.

ಎರಡನೇ ಹಂತದ ಪ್ರಯೋಗಕ್ಕೆ ಒಪ್ಪಿಗೆ ದೊರೆತ ಕೂಡಲೇ 14 ನಗರಗಳ 1500 ಜನರ ಮೇಲೆ ಸೆರಂ ಇನ್‌ಸ್ಟಿಟ್ಯೂಟ್ ಲಸಿಕೆಯ ಪ್ರಯೋಗ ಕೆಲಸ ಆರಂಭಿಸಲಿದೆ ಎಂದು ಐಸಿಎಂಆರ್‌ ಮಹಾನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT