ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ: ಸಂದರ್ಶನ ಮುಂದೂಡಿದ ಯುಪಿಎಸ್‌ಸಿ

UPSC defers interviews for civil services exam due to surge in COVID-19 cases
Last Updated 19 ಏಪ್ರಿಲ್ 2021, 15:14 IST
ಅಕ್ಷರ ಗಾತ್ರ

ವದೆಹಲಿ: ಕೋವಿಡ್ ಪರಿಸ್ಥಿತಿಯಿಂದಾಗಿ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2020ರ ಸಾಲಿಗೆ ಕೇಂದ್ರ ಆಡಳಿತಾತ್ಮಕ ಸೇವೆ ಹುದ್ದೆಗಳಿಗೆ ನಡೆಯಬೇಕಿದ್ದ ಸಂದರ್ಶನಗಳನ್ನು ಮುಂದೂಡಿದೆ.

‘ಸಂದರ್ಶನ ಮತ್ತು ನೇಮಕಾತಿ ಪರೀಕ್ಷೆಗಳು, ಅಭ್ಯರ್ಥಿಗಳು ದೇಶದ ವಿವಿಧೆಡೆಯಿಂದ ಯಾವಾಗ ಬರಬೇಕು ಎಂಬುದನ್ನು ಕಾಲಕಾಲಕ್ಕೆ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು. ಪರಿಷ್ಕೃತ ವೇಳಾಪಟ್ಟಿಯನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು‘ ಎಂದು ಯುಪಿಎಸ್‌ಸಿ ಸೋಮವಾರ ಹೇಳಿಕೆ ನೀಡಿದೆ.

ಪರಿಷ್ಕೃತ ದಿನಾಂಕ ಕುರಿತು ಅಭ್ಯರ್ಥಿಗಳಿಗೆ 15 ದಿನ ಮೊದಲೇ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ

ಸದ್ಯದ ಸ್ಥಿತಿಯಲ್ಲಿ ಪರೀಕ್ಷೆ ಮತ್ತು ಸಂದರ್ಶನ ನಡೆಸುವುದು ಕಷ್ಟ ಸಾಧ್ಯ ಎಂದು ಯುಪಿಎಸ್‌ಸಿ ವಿಶೇಷ ಸಭೆಯು ನಿರ್ಧರಿಸಿತು. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಗೆ (ಇಒ/ಎಒ) ಹುದ್ದೆಗಳಿಗೆ ಮೇ 9ರಂದು ನಡೆಯಬೇಕಿದ್ದ ನೇಮಕಾತಿ ಪರೀಕ್ಷೆಯನ್ನುಈಗಿನ ಸ್ಥಿತಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದೂ ಹೇಳಿಕೆಯು ತಿಳಿಸಿದೆ.

ಕೇಂದ್ರ ಆಡಳಿತಾತ್ಮಕ ಸೇವೆಯ (ಐಎಎಸ್., ಐಪಿಎಸ್‌, ಮತ್ತು ಐಎಫ್‌ಎಸ್‌) ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಯುಪಿಎಸ್‌ಸಿ ಮೂರು ಹಂತಗಳಲ್ಲಿ ಅಂದರೆ ಪ್ರಿಲಿಮಿನರಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT