ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕಚ್ಚಾ ಸಾಮಗ್ರಿಗಳ ರಫ್ತಿಗೆ ಅಮೆರಿಕ ನಿರ್ಬಂಧ ಪ್ರಧಾನಿ ಗಮನಿಸಲಿ: ಸಿಪಿಎಂ

Last Updated 17 ಏಪ್ರಿಲ್ 2021, 11:48 IST
ಅಕ್ಷರ ಗಾತ್ರ

ನವದೆಹಲಿ: ಲಸಿಕೆಯ ಕಚ್ಚಾಸಾಮಗ್ರಿಗಳ ರಫ್ತು ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ, ಲಸಿಕೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿದ್ದು, ಕೊರತೆಗೂ ಕಾರಣವಾಗಿದೆ ಎಂದು ಸಿಪಿಎಂ ಆರೋಪಿಸಿದೆ.

ಈ ಕುರಿತು ಹೇಳಿಕೆ ನೀಡಿರು ಪಕ್ಷದ ಪಾಲಿಟ್‌ಬ್ಯೂರೊ, ಜೋ ಬೈಡನ್‌ ನೇತೃತ್ವದ ಅಮೆರಿಕ ಆಡಳಿತದ ಈ ನಿಲುವು ಅದರ ದ್ವಂದ್ವ ನಿಲುವಿಗೆ ನಿದರ್ಶನವಾಗಿದೆ ಎಂದು ಟೀಕಿಸಿದೆ.

‘ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಧಕ್ಕೆಯಾಗಿದೆ. ಅಗತ್ಯ ಪ್ರಮಾಣದ ಕಚ್ಚಾ ಸಾಮಗ್ರಿಗಳ ಕೊರತೆ ಇದಕ್ಕೆ ಕಾರಣ. ಪ್ರಮುಖವಾಗಿ ಬೇಕಿರುವ ಫಿಲ್ಟರ್‌,ಸೊಲ್ಯೂಷನ್‌,ಪ್ಲಾಸ್ಟಿಕ್‌ ಬ್ಯಾಗ್‌ಗಳು ಅಮೆರಿಕದಿಂದಲೇ ಬರಬೇಕಿದೆ. ಆದರೆ, ರಕ್ಷಣಾ ಉತ್ಪನ್ನಗಳ ಕಾಯ್ಡೆಯಡಿ ಅಮೆರಿಕ ಇವುಗಳ ರಫ್ತಿಗೆ ನಿರ್ಬಂಧ ಹೇರಿದೆ’ ಎಂದಿದೆ.

ಭಾರತ ಕ್ವಾಡ್‌ ಸದಸ್ಯ ರಾಷ್ಟ್ರವಾಗಿ ಪ್ರಧಾನಿ ನರೇಂದ್ರ ಮೋದಿ ಈ ಸಮಸ್ಯೆಯತ್ತ ಗಮನಹರಿಸಿ, ಅಗತ್ಯ ಕಚ್ಚಾ ಸಾಮಗ್ರಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಭಾರತವಲ್ಲದೆ, ಅಮೆರಿಕ, ಆಸ್ಟ್ರೇಲಿಯ, ಜಪಾನ್‌ ಕ್ವಾಡ್‌ ಸಮೂಹದ ಇತರ ಸದಸ್ಯ ರಾಷ್ಟ್ರಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT