ಬುಧವಾರ, ಮಾರ್ಚ್ 29, 2023
25 °C

ಈ ವರ್ಷ ದಾಖಲೆ ಸಂಖ್ಯೆಯ ವೀಸಾ ಪ್ರಕ್ರಿಯೆ ನಡೆಸಲು ಯೋಜನೆ: ಜಾನ್‌ ಬಲ್ಲಾರ್ಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಅಮೆರಿಕ ರಾಯಭಾರ ಕಚೇರಿ ಹಾಗೂ ಭಾರತದಲ್ಲಿರುವ ಅದರ ಕಾನ್ಸುಲೇಟ್‌ಗಳು ಈ ವರ್ಷ ಭಾರತೀಯರಿಗೆ ಸಂಬಂಧಿಸಿದ ವೀಸಾ ಪ್ರಕ್ರಿಯೆಯನ್ನು ದಾಖಲೆ ಸಂಖ್ಯೆಯಲ್ಲಿ ನಡೆಸಲು ಯೋಜನೆ ಹೊಂದಿವೆ’ ಎಂದು ಮುಂಬೈ ಕಾನ್ಸುಲರ್‌ ಮುಖ್ಯಸ್ಥ ಜಾನ್‌ ಬಲ್ಲಾರ್ಡ್‌ ಶನಿವಾರ ಹೇಳಿದ್ದಾರೆ.

‘ಕಳೆದ ವರ್ಷ ರಾಯಭಾರ ಕಚೇರಿಯು ಭಾರತದ 1.25 ಲಕ್ಷ ಮಂದಿಗೆ ವಿದ್ಯಾರ್ಥಿ ವೀಸಾ ಮಂಜೂರು ಮಾಡಿತ್ತು. ಈ ಬಾರಿ ಇದಕ್ಕಿಂತಲೂ ಹೆಚ್ಚು ಮಂದಿ ವಿದ್ಯಾರ್ಥಿ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಒಟ್ಟು 8 ಲಕ್ಷಕ್ಕೂ ಅಧಿಕ ವೀಸಾ ವಿತರಿಸಲಾಗಿದೆ. ಕೋವಿಡ್‌ ಪೂರ್ವದಲ್ಲಿದ್ದ ಪರಿಸ್ಥಿತಿಗೆ ನಾವು ಮರಳುತ್ತಿದ್ದೇವೆ’ ಎಂದಿದ್ದಾರೆ.

‘ವೀಸಾ ನವೀಕರಣಕ್ಕಾಗಿ ಇನ್ನು ಮುಂದೆ ಅಭ್ಯರ್ಥಿಗಳು ಇ–ಮೇಲ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ವೀಸಾಗಾಗಿ ಕಾಯುವ ಅವಧಿಯನ್ನು ತಗ್ಗಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎಂದೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು