ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಎರಡನೇ ಹಂತದಲ್ಲಿ ಶೇ 25ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು

Last Updated 9 ಫೆಬ್ರುವರಿ 2022, 10:46 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸುತ್ತಿರುವವರ ಪೈಕಿ ಶೇ 25ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಾಗಿದ್ದಾರೆ.

586 ಅಭ್ಯರ್ಥಿಗಳ ಪೈಕಿ 584 ಮಂದಿ ಸಲ್ಲಿಸಿರುವ ಅಫಿಡವಿಟ್‌ ಅನ್ನು ಅಸೋಶಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಧ್ಯಯನ ಮಾಡಿ ವಿಶ್ಲೇಷಣೆ ಪ್ರಕಟಿಸಿದೆ.

ಅದರ ಪ್ರಕಾರ, 147 ಮಂದಿ ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳು ಎಂದು ವರದಿ ಹೇಳಿದೆ.

ಈ ಸಂಸ್ಥೆ ವಿಶ್ಲೇಷಣೆ ಮಾಡಿರುವ ಸಮಾಜವಾದಿ ಪಕ್ಷದ 52 ಅಭ್ಯರ್ಥಿಗಳ ಪೈಕಿ 35, ಕಾಂಗ್ರೆಸ್‌ನ 54ರ ಪೈಕಿ 23, ಬಿಎಸ್‌ಪಿಯ 55ರ ಪೈಕಿ 20, ಬಿಜೆಪಿಯ 53ರಲ್ಲಿ 18 ಮತ್ತು ಆರ್‌ಎಲ್‌ಡಿಯ 3ರಲ್ಲಿ 1 ಹಾಗೂ ಎಎಪಿಯ 49ರಲ್ಲಿ 7 ಮಂದಿ ತಮ್ಮ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಪ್ರಕರಣ ಇರುವ ಕುರಿತು ಉಲ್ಲೇಖಿಸಿದ್ದಾರೆ.

ಎರಡನೇ ಹಂತದಲ್ಲಿ 55 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT