ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

52 ಸೆಕೆಂಡ್‌ಗಳಲ್ಲಿ 100 ಕಿ.ಮೀ.ವೇಗ: ದಾಖಲೆ ಮುರಿದ ‘ವಂದೆ ಭಾರತ’ ರೈಲು

Last Updated 11 ಸೆಪ್ಟೆಂಬರ್ 2022, 15:44 IST
ಅಕ್ಷರ ಗಾತ್ರ

ನವದೆಹಲಿ: ಸೆಮಿ ಹೈಸ್ಪೀಡ್‌ ರೈಲು ‘ವಂದೆ ಭಾರತ’ ಎಕ್ಸ್‌ಪ್ರೆಸ್ 52 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ.ನಷ್ಟು ವೇಗ ಸಾಧಿಸುವ ಮೂಲಕ ಬುಲೆಟ್‌ ಟ್ರೇನ್‌ನ ದಾಖಲೆಯನ್ನು ಮುರಿದಿದೆ.

ಅಹಮದಾಬಾದ್‌–ಮುಂಬೈ ನಡುವೆ ಶುಕ್ರವಾರ ಈ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಗಂಟೆಗೆ 130 ಕಿ.ಮೀ ವೇಗದೊಂದಿಗೆ ತಡೆರಹಿತವಾಗಿ ಚಲಿಸಿದ ರೈಲು, ಈ ನಗರಗಳ ನಡುವಿನ 491 ಕಿ.ಮೀ. ದೂರವನ್ನು 5 ಗಂಟೆ 14 ನಿಮಿಷಗಳಲ್ಲಿ ಕ್ರಮಿಸಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಗದಿತ ವೇಳಾಪಟ್ಟಿ ಹಾಗೂ ನಿಲುಗಡೆಗಳೊಂದಿಗೆ ಸಂಚರಿಸಿದ ಸಂದರ್ಭದಲ್ಲಿ ಇಷ್ಟೇ ದೂರವನ್ನು ಈ ರೈಲು 6 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT