ಮಂಗಳವಾರ, ಮೇ 11, 2021
26 °C

ತರುಣ್‌ ತೇಜಪಾಲ್ ವಿರುದ್ಧದ‌ ಅತ್ಯಾಚಾರ ಪ್ರಕರಣ: ಏ.27ಕ್ಕೆ ತೀರ್ಪು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಪಣಜಿ: ತೆಹಲ್ಕಾ ನಿಯತಕಾಲಿಕೆ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜಪಾಲ್‌ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಗೋವಾದ ಮಾಪುಸಾದ ಸೆಷನ್ಸ್ ಕೋರ್ಟ್ ಏಪ್ರಿಲ್‌ 27ರಂದು ತೀರ್ಪು ನೀಡಲಿದೆ.

2013ರಲ್ಲಿ ಗೋವಾದ ಪಂಚತಾರಾ ಹೋಟೆಲ್‌ನ ಲಿಫ್ಟ್‌ನೊಳಗೆ ತರುಣ್‌ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳಾ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು.

ಮಾರ್ಚ್‌ 8ರಂದು ತೇಜಪಾಲ್‌ ಪ್ರಕರಣದಲ್ಲಿ ಅಂತಿಮ ವಾದವನ್ನು ಆಲಿಸಿದ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶೆ ಕ್ಷಮಾ ಜೋಶಿ ಅವರು ಏಪ್ರಿಲ್‌ 27ರಂದು ಪ್ರಕರಣದ ತೀರ್ಪು ನೀಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ತನಿಖಾ ಅಧಿಕಾರಿ ಸುನಿತಾ ಸಾವಂತ್‌ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಗೋವಾ ಅಪರಾಧ ವಿಭಾಗವು ಫೆಬ್ರುವರಿ, 2014ರಲ್ಲಿ ತೇಜಪಾಲ್‌ ವಿರುದ್ಧ 2,846 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಇದನ್ನೂ ಓದಿ... ವರ್ಷದಲ್ಲಿ ಮೊದಲ ಬಾರಿಗೆ ಪೆಟ್ರೋಲ್‌ ದರ 18 ಪೈಸೆ, ಡೀಸೆಲ್‌ 17 ಪೈಸೆ ಇಳಿಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು