ಗುರುವಾರ , ಆಗಸ್ಟ್ 18, 2022
27 °C

ಅತ್ಯಾಚಾರ ಪ್ರಕರಣ: ನಟ ವಿಜಯಬಾಬು ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಚ್ಚಿ: ಕೇರಳದ ನಟಿ ವಿರುದ್ಧದ ಅತ್ಯಾಚಾರದ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಮಲಯಾಳಂ ಚಿತ್ರ ನಿರ್ಮಾಪಕ, ನಟ ವಿಜಯ ಬಾಬು ಅವರನ್ನು ಸೋಮವಾರ ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ.

ಜೂನ್‌ 22 ರಂದು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹಾಗಾಗಿ ನಟನ ಬಂಧನ ದಾಖಲಿಸಿ, ಕೋರ್ಟ್‌ ನಿಯಮದ ಪ್ರಕಾರ ಬಿಡುಗಡೆ ಮಾಡಲಾಗುವುದು. ₹ ಐದು ಲಕ್ಷ ಭದ್ರತಾ ಖಾತರಿಯೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಕೋರ್ಟ್‌ ತಿಳಿಸಿದೆ.

ಜೂನ್ 27 ರಿಂದ ಜುಲೈ 3 ರ ಅವಧಿಯಲ್ಲಿ ತನಿಖೆ ಅಗತ್ಯತೆ ಸುಗಮಗೊಳಿಸಲು ಪೋಲೀಸರ ವಶದಲ್ಲಿದ್ದಾರೆ ಎಂದು ಪರಿಗಣಿಸಿ ಕೋರ್ಟ್‌ ನಿರೀಕ್ಷಣಾ ಜಾಮೀನು ಮನವಿ ಅಂಗೀಕರಿಸಿದೆ. ಈ ಅವಧಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಬಾಬು ಎಸಗಿರುವ ಅಪರಾಧ ಸ್ಥಳಗಳಿಗೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.