ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50ರಷ್ಟು ಕೋವಿಡ್‌ ಲಸಿಕೆ ಭಾರತಕ್ಕೆ ಮೀಸಲು: ಸೆರಂ ಇನ್‌ಸ್ಟಿಟ್ಯೂಟ್‌

Last Updated 28 ಡಿಸೆಂಬರ್ 2020, 17:32 IST
ಅಕ್ಷರ ಗಾತ್ರ

ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸುವ ಕೋವಿಡ್‌–19 ಲಸಿಕೆಯ ಒಟ್ಟು ಪ್ರಮಾಣದಲ್ಲಿ ಶೇ 50ರಷ್ಟು ಭಾರತಕ್ಕಾಗಿ ಮೀಸಲಿಡುವುದಾಗಿ ಅದಾರ್‌ ಪೂನಾವಾಲಾ ಸೋಮವಾರ ಭರವಸೆ ವ್ಯಕ್ತಪಡಿಸಿದ್ದಾರೆ.

'ಅತಿ ಹೆಚ್ಚು ಜನಸಂಖ್ಯೆಯಿರುವ ಭಾರತಕ್ಕೆ ಮೊದಲ 5 ಕೋಟಿ ಡೋಸ್‌ಗಳ ಪೈಕಿ ಹೆಚ್ಚಿನ ಪ್ರಮಾಣದ ಲಸಿಕೆ ಪೂರೈಕೆ ಮಾಡುವ ಸಾಧ್ಯತೆ ಇದೆ. ನಾವು ತಯಾರಿಸುವ ಲಸಿಕೆಯಲ್ಲಿ ಶೇ 50ರಷ್ಟು ಭಾರತಕ್ಕೆ ಮತ್ತು ಶೇ 50ರಷ್ಟು ಲಸಿಕೆಯನ್ನು ಕೊವ್ಯಾಕ್ಸ್‌ಗೆ ನೀಡುತ್ತೇವೆ. ಭಾರತ ಸಹ ಜಾಗತಿಕ ಲಸಿಕೆ ಹಂಚಿಕೆ ಕೊವ್ಯಾಕ್ಸ್‌ನ ಭಾಗವಾಗಿದೆ' ಎಂದಿದ್ದಾರೆ.

'ಪ್ರಸ್ತುತ ನಮ್ಮಲ್ಲಿ 4ರಿಂದ 5 ಕೋಟಿ ಡೋಸ್‌ಗಳಷ್ಟು ಆಕ್ಸ್‌ಫರ್ಡ್‌ನ ಕೋವಿಡ್‌ ಲಸಿಕೆ ಕೋವಿಶೀಲ್ಡ್‌ ಸಂಗ್ರಹವಿದೆ. ಕೆಲವು ದಿನಗಳಲ್ಲೇ ಔಷಧ ನಿಯಂತ್ರಣ ಸಂಸ್ಥೆಯಿಂದ ಅನುಮೋದನೆ ಸಿಗುತ್ತಿದ್ದಂತೆ, ಪಡೆದುಕೊಳ್ಳುವ ಲಸಿಕೆ ಪ್ರಮಾಣ ಸರ್ಕಾರದ ಮೇಲೆ ಅವಲಂಬಿಸಿರುತ್ತದೆ. 2021ರ ಜುಲೈ ಅವಧಿಗೆ ನಾವು 30 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸಲಿದ್ದೇವೆ' ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ.

'2021ರ ಮೊದಲ ಆರು ತಿಂಗಳು ಜಾಗತಿಕವಾಗಿ ಲಸಿಕೆ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಅದಕ್ಕೆ ಯಾರೂ ಏನೂ ಮಾಡಲಾಗುವುದಿಲ್ಲ, ಆದರೆ 2021ರ ಆಗಸ್ಟ್‌–ಸೆಪ್ಟೆಂಬರ್‌ಗೆ ಇತರೆ ಲಸಿಕೆ ತಯಾರಿಕರು ಲಸಿಕೆ ಪೂರೈಕೆ ಮಾಡುವುದರಿಂದ ಕೊರತೆ ಕಡಿಮೆಯಾಗಲಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT