ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ವಿಮಾನದಲ್ಲಿ ಮತಪೆಟ್ಟಿಗೆಗೂ ಕಾಯ್ದಿರಿಸಿದ ಆಸನ

Last Updated 12 ಜುಲೈ 2022, 14:24 IST
ಅಕ್ಷರ ಗಾತ್ರ

ನವದೆಹಲಿ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಅಂಗವಾಗಿ ವಿವಿಧ ರಾಜ್ಯಗಳ ರಾಜಧಾನಿಗಳಿಗೆ ಕಳುಹಿಸಲು ಮತಪಟ್ಟಿಗೆಗಳಿಗೆ ವಿಮಾನಗಳಲ್ಲಿ ಪ್ರಯಾಣಿಕರಂತೆ ಆಸನಗಳನ್ನು ಕಾಯ್ದಿರಿಸಲಾಗಿದೆ.

ಮತಪೆಟ್ಟಿಗೆಗಳಿಗೆ ವಿಮಾನದಲ್ಲಿ ‘ಮಿಸ್ಟರ್‌ ಬ್ಯಾಲೆಟ್‌ ಬಾಕ್ಸ್‌’ ಹೆಸರಿನಲ್ಲಿ ಪ್ರತ್ಯೇಕವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಮತದಾನಕ್ಕೆ ಅಗತ್ಯವಿರುವ ಪರಿಕರಗಳನ್ನು ಸಾಗಿಸುವ ಅಧಿಕಾರಿಗಳ ಪಕ್ಕದ ಆಸನಗಳಲ್ಲಿ ಇವುಗಳನ್ನು ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

14 ಮತಪಟ್ಟಿಗೆಗಳನ್ನು ಮಂಗಳವಾರ ಕಳುಹಿಸಲಾಗಿದೆ. ಬುಧವಾರ 16 ಮತಪೆಟ್ಟಿಗೆಗಳನ್ನು ಕಳುಹಿಸಲಾಗುವುದು. ಹಿಮಾಚಲ ಪ್ರದೇಶಕ್ಕೆ ರಸ್ತೆ ಮಾರ್ಗದ ಮೂಲಕ ಕಳುಹಿಸಲಾಗುವುದು ಎಂದೂ ವಿವರಿಸಿದ್ದಾರೆ.

ರಾಜ್ಯಗಳ ಸಹಾಯಕ ಚುನಾವಣಾಧಿಕಾರಿ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಒಬ್ಬ ಅಧಿಕಾರಿ, ನವದೆಹಲಿಯಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಬಂದು ಮತಪೆಟ್ಟಿಗೆಗಳನ್ನು ಮತ್ತು ಮತದಾನಕ್ಕೆ ಅಗತ್ಯವಿರುವ ಪರಿಕರಗಳನ್ನು ಪಡೆದು ಅಂದೇ ಮರಳಲಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT