ಶನಿವಾರ, ಫೆಬ್ರವರಿ 4, 2023
28 °C

ಜಮ್ಮು–ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ: ಮುಫ್ತಿ ಪ್ರತಿಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ಬಿಜೆಪಿಯು 2019ರ ಆಗಸ್ಟ್‌ 5ರಂದು ನಮ್ಮ ರಾಜ್ಯದಿಂದ ಕಸಿದುಕೊಂಡಿರುವ ಸಂವಿಧಾನದ ವಿಧಿ 370ರಡಿಯ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುತ್ತೇವೆ’ ಎಂದು ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ ಪ್ರತಿಜ್ಞೆ ಮಾಡಿದರು.

ಪಿಡಿಪಿ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಅಲ್ಲಾನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅಂದು ಬಿಜೆಪಿ ನಮ್ಮಿಂದ ಕಸಿದುಕೊಂಡಿರುವ ಯಾವುದೇ ಬಗೆಯ ವಿಶೇಷ ಸ್ಥಾನಮಾನವನ್ನು ನಮ್ಮ ರಾಜ್ಯದ ಹಿತಕ್ಕಾಗಿ ಮರಳಿ ತರಲಾಗುವುದು’ ಎಂದು ತಮ್ಮ ನಿಲುವು ಪ್ರಕಟಿಸಿದರು.

‌‘ಭಾರತವೆಂದರೆ ಬಿಜೆಪಿಯಲ್ಲ. ಬಿಜೆಪಿಯು ಭಾರತವನ್ನು ತನ್ನ ರಣಭೂಮಿಯಾಗಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ’ ಎಂದು ಮುಫ್ತಿ ಗುಡುಗಿದರು.

ಮೈತ್ರಿ ಸಮರ್ಥನೆ: 2014ರ ಚುನಾವಣೆಯ ನಂತರ ಬಿಜೆಪಿಯೊಂದಿಗೆ ತಮ್ಮ ಪಕ್ಷ ಮಾಡಿಕೊಂಡ ಮೈತ್ರಿ ಸಮರ್ಥಿಸಿಕೊಂಡ ಅವರು, ‘ಪಿಡಿಪಿಯು ಅವರ (ಬಿಜೆಪಿಯ) ಕೈಗಳನ್ನು ಕಟ್ಟಿಹಾಕಿತ್ತು. 2018ರ ಜೂನ್‌ನಲ್ಲಿ ಮೈತ್ರಿ ಕೊನೆಗೊಂಡ ನಂತರ ಅವರು ತಮ್ಮ ರಹಸ್ಯ ಕಾರ್ಯಸೂಚಿಗಳನ್ನು ಜಮ್ಮು–ಕಾಶ್ಮೀರದಲ್ಲಿ ಕಾರ್ಯಗತಗೊಳಿಸಲು ಶುರು ಮಾಡಿದರು’ ಎಂದು ದೂರಿದರು.

‘ಮೊಹಮ್ಮದ್‌ ಸಯೀದ್‌ ಅವರು ದೂರದೃಷ್ಟಿವುಳ್ಳ ನಾಯಕ. ಅವರು ಕರಡಿಯನ್ನು (ಬಿಜೆಪಿ) ಕಟ್ಟಿಹಾಕಿದ್ದರು. ಅದು ಯಾವಾಗ ಕಟ್ಟು ಬಿಚ್ಚಿಕೊಂಡಿತೋ ಆಗಿನಿಂದ ಇಡೀ ಕಾಶ್ಮೀರವನ್ನು ಪರಚುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು