ಭಾನುವಾರ, ಏಪ್ರಿಲ್ 2, 2023
33 °C

ಲಕ್ಷದ್ವೀಪ ಸಂಸದರ ಸದಸ್ಯತ್ವದ ಸಿಂಧುತ್ವ: ಕಾಯ್ದೆಯ ಪ್ರಕಾರ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಕ್ಷ್ಮದ್ವೀಪ ಕ್ಷೇತ್ರದ ಸಂಸದರ ಅನರ್ಹತೆ ವಿಷಯದಲ್ಲಿ ಕಾನೂನು ಪ್ರಕಾರವೇ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗವು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೊಲೆಯತ್ನ ಪ್ರಕರಣದಲ್ಲಿ ಸಂಸದ ಮೊಹಮ್ಮದ್ ಫೈಝಲ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆ ಆದೇಶವನ್ನು ಕೇರಳ ಹೈಕೋರ್ಟ್ ಅಮಾನತುಪಡಿಸಿದೆ ಎಂಬುದನ್ನು ಗಮನಿಸಲಾಗುವುದು ಎಂದು ಆಯೋಗವು ತಿಳಿಸಿತು.

ಲಕ್ಷ್ಮದ್ವೀಪ ಕ್ಷೇತ್ರಕ್ಕೆ ಉಪಚುನಾವಣೆ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಫೈಜಲ್‌ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಆಧಾರದಲ್ಲಿ ಆಯೋಗವು ಉಪ ಚುನಾವಣೆಯನ್ನು ಘೋಷಿಸಿತ್ತು.

ಫೈಝಲ್‌ ಪರ ವಕೀಲ ಕಪಿಲ್‌ ಸಿಬಲ್ ಅವರು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಉಪಚುನಾವಣೆ ನಡೆಸಲಾಗದು ಎಂದು ‍ಪ್ರತಿಪಾದಿಸಿದರು. ಆಗ ಆಯೋಗ ಕಾಯ್ದೆಯಂತೆ ಕ್ರಮವಹಿಸಲಿದೆ ಎಂದು ಆಯೋಗದ ಪರ ವಕೀಲ ಮಣಿಂದರ್‌ ಸಿಂಗ್‌ ಹೇಳಿದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಬಿ.ವಿ.ನಾಗರತ್ನ ಅವರಿದ್ದ ಪೀಠ ಇದನ್ನು ಪರಿಗಣಿಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು