ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಫಸ್ಟ್‌ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು: ಜೈಪುರಕ್ಕೆ ಮಾರ್ಗ ಬದಲಾವಣೆ

ಅಕ್ಷರ ಗಾತ್ರ

ನವದೆಹಲಿ: ದೆಹಲಿಯಿಂದ ಗುವಾಹಟಿಗೆ ಹೊರಟಿದ್ದ ಗೋ ಫಸ್ಟ್ ಸಂಸ್ಥೆಯ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಮಾರ್ಗ ಮಧ್ಯೆ ಬಿರುಕು ಕಂಡುಬಂದಿದ್ದು, ಜೈಪುರದತ್ತ ವಿಮಾನದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಗೋ ಫಸ್ಟ್ ವಿಮಾನದಲ್ಲಿ ಎರಡು ದಿನಗಳಲ್ಲಿ ಕಂಡು ಬಂದ ಮೂರನೇ ದೋಷ ಇದಾಗಿದೆ.

ಮಂಗಳವಾರ, ಮುಂಬೈ–ಲೆಹ್, ಶ್ರೀನಗರ–ದೆಹಲಿ ವಿಮಾನಗಳ ಎಂಜಿನ್‌ಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿತ್ತು.

ಭಾರೀ ಆತಂಕ

ಕಳೆದ ಕೆಲ ವಾರಗಳಿಂದ ಸ್ಪೈಸ್ ಜೆಟ್, ಇಂಡಿಗೋ ಮತ್ತು ಇದೀಗ ಗೋ ಫಸ್ಟ್ ವಿಮಾನಗಳಲ್ಲಿ ತಾಂತ್ರಿಕ ದೋಷದಂತಹ ಘಟನೆಗಳು ಕಂಡುಬರುತ್ತಿದೆ. ಕಳೆದ 30 ದಿನಗಳಿಗೂ ಕಡಿಮೆ ಅವಧಿಯಲ್ಲಿ ಸ್ಪೈಸ್ ಜೆಟ್ ಒಂದರಲ್ಲೇ 9 ಬಾರಿ ಸಮಸ್ಯೆ ತಲೆದೋರಿದೆ ಎಂದು ‘ಇಂಡಿಯಾ ಟುಡೆ’ವರದಿ ಮಾಡಿದೆ.

ಜುಲೈ 2ರಂದು ಜಬಲ್‌ಪುರಕ್ಕೆ ಹೊರಟಿದ್ದ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಗೆ ವಿಮಾನ ವಾಪಸ್ ಆಗಿತ್ತು. ಜೂನ್ 24 ಮತ್ತು 25ರಂದು ಎರಡು ಪ್ರತ್ಯೇಕ ವಿಮಾನಗಳಲ್ಲಿ ಟೇಕಾಫ್ ವೇಳೆ ಫ್ಯೂಸ್‌ಲೇಜ್‌ ಬಾಗಿಲಿನ ಎಚ್ಚರಿಕೆ ಲೈಟ್‌ಗಳು ಪದೇ ಪದೇ ಹೊತ್ತಿಕೊಂಡ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನೇ ರದ್ದು ಮಾಡಲಾಗಿತ್ತು.

ಜೂನ್ 19ರಂದು ಪಾಟ್ನಾದಲ್ಲಿ 185 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆದ ಕೆಲವೇ ಸಮಯದಲ್ಲಿ ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಕೆಲವೇ ನಿಮಿಷಗಳಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT