ಮಂಗಳವಾರ, ಸೆಪ್ಟೆಂಬರ್ 21, 2021
21 °C

ಮುಜಫ್ಫರ್‌ನಗರ: ವರದಕ್ಷಿಣೆಗಾಗಿ ವಿಷವುಣಿಸಿ ಮಹಿಳೆಯ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಜಫ್ಫರ್‌ನಗರ: ತಮ್ಮ ವರದಕ್ಷಿಣೆಯ ಬೇಡಿಕೆಯನ್ನು ಈಡೇರಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಆಕೆಯ ಅತ್ತೆಯ ಮನೆಯವರು ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.

‘ಈ ಘಟನೆಯು ಜಿಲ್ಲೆಯ ಅಜಾದ್‌ ಚೌಕ್‌ನಲ್ಲಿ ನಡೆದಿದ್ದು, ಈ ಸಂಬಂಧ ಮಹಿಳೆಯ ಗಂಡ ಮತ್ತು ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಸಂತ್ರಸ್ತೆ ಮುಸ್ಕಾನ್‌ ಅವರು ಕಾಸಿಫ್ ಎಂಬಾತನನ್ನು ಮೇ ತಿಂಗಳಲ್ಲಿ ಮದುವೆಯಾಗಿದ್ದರು’ ಎಂದು ಅವರು ಹೇಳಿದರು.

‘ಹಲವು ತಿಂಗಳಿನಿಂದ ಕಾಸಿಫ್ ವರದಕ್ಷಿಣೆಗಾಗಿ ಮುಸ್ಕಾನ್‌ಗೆ ಕಿರುಕುಳ ನೀಡುತ್ತಿದ್ದ. ಬಳಿಕ ಅತ್ತೆಯ ಮನೆಯವರು ಆಕೆಗೆ ವಿಷವುಣಿಸಿ ಕೊಂದಿದ್ದಾರೆ’ ಎಂದು ಮುಸ್ಕಾನ್‌ ಕುಟುಂಬದವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ... ಇಂಡೋನೇಷ್ಯಾ: ಸಣ್ಣ ಕಾರ್ಗೊ ವಿಮಾನ ನಾಪತ್ತೆ, ಪೈಲಟ್‌ಗಾಗಿ ಹುಡುಕಾಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು