ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾದಲ್ಲಿ ವಿಶ್ವದ ಪುರಾತನ ಗುಹಾ ಚಿತ್ರಕಲೆ ಪತ್ತೆ

ಗುಹೆಯಲ್ಲಿ 45 ಸಾವಿರ ವರ್ಷಗಳ ಹಿಂದಿನ ಕಾಡುಹಂದಿ ಚಿತ್ರ
Last Updated 14 ಜನವರಿ 2021, 8:30 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಅತ್ಯಂತ ಪುರಾತನ ‘ಗುಹಾ ಚಿತ್ರಕಲೆ‘ಯನ್ನು ಪುರಾತತ್ವ ಶಾಸ್ತ್ರಜ್ಞರು ಇಂಡೊನೇಷ್ಯಾದಲ್ಲಿ ಪತ್ತೆ ಮಾಡಿದ್ದಾರೆ.

ಪುರಾತತ್ವ ಶಾಸ್ತ್ರಜ್ಞರು ಪತ್ತೆ ಮಾಡಿರುವ ಈ ಗುಹಾ ಚಿತ್ರಕಲೆಯಲ್ಲಿ 45,500 ವರ್ಷಗಳಷ್ಟು ಹಿಂದೆ ಚಿತ್ರಿಸಿರುವ ಅತ್ಯಂತ ದೊಡ್ಡದಾದ ಕಾಡು ಹಂದಿಯ ಚಿತ್ರವಿದೆ.

ಇಂಡೊನೇಷ್ಯಾದ ದಕ್ಷಿಣ ಸುಲಾವೇಸಿ ಕಣಿವೆ ಪ್ರದೇಶದಲ್ಲಿರುವ ಗುಹೆಗಳಲ್ಲಿ ಈ ಚಿತ್ರಕಲೆ ಪತ್ತೆಯಾಗಿದೆ. ಇದರಲ್ಲಿ ಇಂಡೊನೇಷ್ಯಾ ದ್ವೀಪದ ಸ್ಥಳೀಯ ತಳಿ ‘ವಾರ್ಟಿ ಕಾಡು ಹಂದಿ‘ಯನ್ನು ಹೋಲುವ ಚಿತ್ರವಿದೆ.

ಗುಹೆ ಇರುವ ಸ್ಥಳ
ಗುಹೆ ಇರುವ ಸ್ಥಳ

ಈ ಗುಹಾ ಕಲೆ ಪತ್ತೆಯಾಗಿರುವ ಮಾಹಿತಿ ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಬುಧವಾರ ಪ್ರಕಟವಾಗಿದೆ. ಈ ಗುಹಾ ಚಿತ್ರಕಲೆಯ ಮೂಲಕ ಪತ್ತೆಯಾದ ವಾರ್ಟಿ ಹಂದಿ ಚಿತ್ರ, ಈ ಪ್ರದೇಶದಲ್ಲಿರುವವರಿಗೆ ಕೆಲವು ಪುರಾತತ್ತ್ವ ಶಾಸ್ತ್ರದ ಪುರಾವೆಗಳನ್ನು ಒದಗಿಸುತ್ತದೆ.

‘ಲಿಯಾಂಗ್ ಟೆಡೋಂಗ್‌ನ ಸುಣ್ಣದ ಗುಹೆಯಲ್ಲಿ ಪತ್ತೆಯಾಗಿರುವ ಸುಲಾವೆಸಿ ವಾರ್ಟಿ ಹಂದಿಯ ಚಿತ್ರ ವಿಶ್ವದ ಅತ್ಯಂತ ಪ್ರಾಚೀನ ಕಲಾಕೃತಿಯಾಗಿದೆ‘ ಎಂದು ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಡಮ್ ಬ್ರೂಮ್ ಹೇಳಿದರು.

‘ಕಡಿದಾದ ಸುಣ್ಣದ ಬಂಡೆಗಳಿಂದ ಆವೃತವಾದ ಕಣಿವೆಯಲ್ಲಿ ಈ ಗುಹೆ ಇದೆ. ಬೇಸಿಗೆಯಲ್ಲಿ ಈ ಕಣಿವೆಗೆ ಬೇಟಿ ನೀಡಿ ಗುಹೆಯನ್ನು ವೀಕ್ಷಿಸಬಹುದು. ಏಕೆಂದರೆ ಮಳೆಗಾಲದಲ್ಲಿ ಕಣಿವೆ ಜಲಾವೃತಗೊಂಡಿರುತ್ತದೆ‘ ಎಂದು ಬ್ರೂಮ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT