ಭಾನುವಾರ, ಜೂನ್ 13, 2021
23 °C

ಪ್ಯಾಲೆಸ್ಟೀನ್‌ ಹಾರಿಸಲು ಕರೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಗಾಜಾದಲ್ಲಿ ಇಸ್ರೇಲ್‌ ನಡೆಸಿದ ವಾಯು ದಾಳಿಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಮುಸ್ಲಿಮರು ತಮ್ಮ ಮನೆ ಮತ್ತು ವಾಹನಗಳ ಮೇಲೆ ಪ್ಯಾಲೆಸ್ಟೀನ್‌ ಧ್ವಜವನ್ನು ಹಾರಿಸುವಂತೆ ಕರೆ ನೀಡಿದ್ದ ಯುವಕನನ್ನು ಗುರುವಾರ ಬಂಧಿಸಲಾಗಿದೆ.

ಅಜಂಗಡ ಜಿಲ್ಲೆಯ ನಿವಾಸಿ ಯಾಸೀರ್‌ ಅಖ್ತರ್‌, ಶುಕ್ರವಾರದ ಪ್ರಾರ್ಥನೆ ಬಳಿಕ ಧ್ವಜವನ್ನು ಹಾರಿಸುವಂತೆ ಫೇಸ್‌ಬುಕ್‌ ಮೂಲಕ ಕರೆ ನೀಡಿದ್ದ.

‘ಈ ಪೋಸ್ಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಬಂದಿದ್ದವು. ಮೊಬೈಲ್‌ ಸಂಖ್ಯೆಯನ್ನು ಆಧರಿಸಿ, ಯುಕನನ್ನು ಪತ್ತೆ ಹಚ್ಚಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು