ಐಟಿ ದಾಳಿಗೆ ಅಂಜೋದೇಕೆ: ಸಂತೋಷ್‌ ಪ್ರಶ್ನೆ

ಮಂಗಳವಾರ, ಏಪ್ರಿಲ್ 23, 2019
29 °C

ಐಟಿ ದಾಳಿಗೆ ಅಂಜೋದೇಕೆ: ಸಂತೋಷ್‌ ಪ್ರಶ್ನೆ

Published:
Updated:

ವಿಜಯಪುರ: ‘ಐಟಿ ದಾಳಿಗೆ ಮುಖ್ಯಮಂತ್ರಿ ಸೇರಿದಂತೆ, ಕಾಂಗ್ರೆಸ್ಸಿಗರು ಅಂಜುತ್ತಿರುವುದು ಏಕೆ? ಬೀದಿಗಿಳಿದು ಪ್ರತಿಭಟಿಸುತ್ತಿರೋದು ಏಕೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಪ್ರಶ್ನಿಸಿದರು.

‘ಐಟಿ ದಾಳಿ ಯಾವಾಗ ನಡೆದರೇನು? ಐದು ವರ್ಷದ ಹಿಂದೆ ಮೋದಿ ಹೇಳಿದಂತೆ, ಭ್ರಷ್ಟರನ್ನು ಬೀದಿಯಲ್ಲಿ ನಿಲ್ಲಿಸುತ್ತಿದ್ದಾರೆ. ಅಕ್ರಮ, ಭ್ರಷ್ಟಾಚಾರ ಬಯಲಿಗೆ ಬಿದ್ದಿದೆ’ ಎಂದು ಶನಿವಾರ ರಾತ್ರಿ ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಮೋದಿ ಭ್ರಷ್ಟಾಚಾರ ರಹಿತ ಆಡಳಿತದ ಜತೆಗೆ ಯೋಗ್ಯತೆ, ಸಾಮರ್ಥ್ಯಕ್ಕೆ ಮನ್ನಣೆ ನೀಡಿದ್ದಾರೆ. ಸಾಲು ಮರದ ತಿಮ್ಮಕ್ಕ, ಪಾವಗಡದ ಸೂಲಗಿತ್ತಿ ನರಸಮ್ಮ, ಉತ್ತರ ಕನ್ನಡದ ಸುಕ್ರಿ ಬೊಮ್ಮಗೌಡ ಅವರು ಪದ್ಮಶ್ರೀ ಪುರಸ್ಕೃತರಾಗಿದ್ದೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

‘ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕರಪತ್ರ ಹಿಡಿದು ಚುನಾವಣಾ ಪ್ರಚಾರ ನಡೆಸಿದರೆ, ಜೆಡಿಎಸ್‌ನವರು ‘ಸೀತಾರಾಮ ಕಲ್ಯಾಣ’ ಚಲನಚಿತ್ರದ ಉಚಿತ ಟಿಕೆಟ್‌ ಹಿಡಿದು ಪ್ರಚಾರ ನಡೆಸಿದ್ದಾರೆ’ ಎಂದು ಸಂತೋಷ್‌ ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !