ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಕ್ಕೆ ಮನೆಯಲ್ಲಿರಲಿ ಪರಿಮಳ ಸೂಸುವ ದೀಪಗಳು

Last Updated 13 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಕೋವಿಡ್‌ ಕಾರಣದಿಂದ ಕಳೆದ ವರ್ಷ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಹಬ್ಬದ ಆಚರಣೆಯ ಕ್ರಮವೂ ಬದಲಾಗಿತ್ತು. ಆದರೆ ಈಗ ಕೋವಿಡ್‌ ಕಡಿಮೆಯಾಗಿರುವುದರಿಂದ ಮತ್ತೆ ಹಬ್ಬಗಳು ಕಳೆಗಟ್ಟುತ್ತಿವೆ. ಹಬ್ಬಗಳೆಂದರೆ ಕೇವಲ ದೇವರ ಪೂಜೆ ಮಾತ್ರವಲ್ಲ, ಮನೆಯನ್ನೂ ಕೂಡ ಸುಂದರವಾಗಿ ಅಲಂಕರಿಸಿಕೊಳ್ಳಬಹುದು. ಹಬ್ಬದಲ್ಲಿ ಮನೆಯೊಳಗೆ ದೈವಿಕ ಕಳೆ ಮೂಡುವಂತೆ ಮಾಡುವುದಲ್ಲದೇ ಪರಿಮಳ ಹೊರ ಸೂಸುವ ಸಾಧನಗಳನ್ನು ಇರಿಸುವ ಮೂಲಕ ಇನ್ನಷ್ಟು ಕಳೆ ಹೆಚ್ಚುವಂತೆ ಅಲಂಕರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಪರಿಮಳ ಹೊರ ಸೂಸುವ ಸಾಧನಗಳನ್ನು ಮನೆಯೊಳಗಿಟ್ಟರೆ ಮನಸ್ಸಿನ ಉಲ್ಲಾಸವೂ ಹೆಚ್ಚಾಗುತ್ತದೆ.

ಸುವಾಸನೆ ಬೀರುವ ಡಿಫ್ಯೂಸರ್‌

ಮನೆಯ ಒಳಗೆ ಕಾಲಿರಿಸಿದ ತಕ್ಷಣ ನಾಸಿಕಕ್ಕೆ ಒಳ್ಳೆಯ ಪರಿಮಳ ತಾಕಿದರೆ ಮನಸ್ಸು ಖುಷಿಯಿಂದ ಕುಣಿದಾಡುತ್ತದೆ. ಕಚೇರಿಯಲ್ಲಿ ಬೆಳಿಗ್ಗೆಯಿಂದ ಕೆಲಸ ಮಾಡಿ ದಣಿದು ಬರುವ ಜೀವಕ್ಕೆ ಮನೆಗೆ ಬಂದಾಕ್ಷಣ ಆಹ್ಲಾದವೆನ್ನಿಸುವ ಪರಿಮಳ ಮನಸ್ಸಿಗೆ ಹಾಯ್ ಎನ್ನಿಸುವುದಲ್ಲದೇ ಕೊಂಚ ವಿಶ್ರಾಂತಿ ಸಿಕ್ಕಂತಾಗುತ್ತದೆ. ನೀವು ಸೌಮ್ಯವಾದ ಹಾಗೂ ಮೃದುವಾದ ಸುಗಂಧವನ್ನು ಇಷ್ಟಪಡುತ್ತೀರಾ, ಹಣ್ಣು ಅಥವಾ ಹೂವಿನ ಸುಗಂಧ ನಿಮಗೆ ಸಹ್ಯವಾಗುವುದೋ ಹೀಗೆ ನಿಮ್ಮ ಆಯ್ಕೆಯ ಡಿಫ್ಯೂಸರ್ ಅನ್ನು ಮನೆಯಲ್ಲಿ ಇರಿಸಬಹುದು. ಹಬ್ಬದ ಸಮಯದಲ್ಲಿ ಭಕ್ತಿ ಭಾವಕ್ಕೆ ಪೂರಕವಾಗುವಂತೆ ಇವುಗಳನ್ನು ಬಳಸಬಹುದು.

ಪರಿಮಳಯಕ್ತ ದೀಪಗಳು

ಪರಿಮಳ ಹೊರ ಸೂಸುವ ದೀಪಗಳು ನಿಮ್ಮ ಮನೆಯ ಅಲಂಕಾರಕ್ಕೆ ಇನ್ನಷ್ಟು ಕಳೆ ತುಂಬುತ್ತವೆ. ಪರಿಮಳಯುಕ್ತ ದೀಪಗಳು ಸುವಾಸನೆ ಹೊರ ಸೂಸುವ ಜೊತೆಗೆ ಮನೆಯ ಒಳಗೆ ಬೆಳಕಿನ ಕಿರಣಗಳನ್ನು ಹರಡುತ್ತವೆ. ಇದರ ವಿನ್ಯಾಸಗಳು ಮನೆಯ ಅಂದವನ್ನೂ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಪರಿಮಳಯುಕ್ತ ಮೇಣದಬತ್ತಿಯಿಂದ ಹಿಡಿದು ಎಲೆಕ್ಟ್ರಿಕ್ ದೀಪದವರೆಗೂ ಈಗ ಮಾರುಕಟ್ಟೆಯಲ್ಲಿ ಲಭ್ಯ. ನಿಮ್ಮ ಆಯ್ಕೆಯ ದೀಪವನ್ನು ಮನೆಗೆ ತಂದು ಹಬ್ಬಕ್ಕೆ ಇನ್ನಷ್ಟು ಮೆರಗು ತುಂಬಬಹುದು.

ಪರಿಮಳಯುಕ್ತ ಆರ್ದ್ರಕಗಳು

ಸರಳವಾದ ಹಾಗೂ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿ ಸುವಾಸನೆ ಸೂಸುವಂತೆ ಮಾಡುವ ಆರ್ದ್ರಕಗಳು (ಹ್ಯುಮಿಡಿಫೈರ್‌) ಈ ಗೃಹಾಲಂಕಾರ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಮನೆಯೊಳಗೆ ಪರಿಮಳ ಹರಡುವಂತೆ ಮಾಡುವ ಸುಲಭ ಹಾಗೂ ಉತ್ತಮ ವಿಧಾನ ಇದಾಗಿದೆ. ಇವು ಸಿಲಿಕಾನ್ ಮ್ಯಾಟ್ ರೂಪದಲ್ಲಿ ಸಿಗುತ್ತವೆ. ಜೊತೆಗೆ ಇವುಗಳಿಗೆ ತುಕ್ಕು ಹಿಡಿಯುವುದೂ ಕಡಿಮೆ. ಇದನ್ನು ಸುಂದರವಾಗಿ ಹಾಗೂ ಕಣ್ಣಿಗೆ ಹಿತ ಎನ್ನಿಸುವ ರೀತಿಯಲ್ಲಿ ವಿನ್ಯಾಸ ಮಾಡಿರುತ್ತಾರೆ. ಇದು ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಆಗಿದ್ದು ಮನೆಯಲ್ಲಿ ಬೇಕೆನ್ನಿಸಿದ ಕಡೆ ಇರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT