ಮಂಗಳವಾರ, ನವೆಂಬರ್ 30, 2021
22 °C

ಕೋವಿಡ್‌: ಎವೈ 4.2 ವೈರಾಣು ಪತ್ತೆಗೆ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ರಿಟನ್‌ನಲ್ಲಿ ಡೆಲ್ಟಾ ರೂಪಾಂತರಿ ಕೊರೊನಾ ವೈರಾಣುವಿನ ಎವೈ 4.2 ಗುಂಪಿನ ವೈರಾಣು ಸೋಂಕು ಹೆಚ್ಚಿರುವುದರಿಂದ ರಾಜ್ಯದಲ್ಲಿ 1,300 ಕೋವಿಡ್‌ ರೋಗಿಗಳ ಮಾದರಿಯನ್ನು ‘ಜಿನೋಮ್‌ ಸೀಕ್ವೆನ್ಸಿಂಗ್‌’ ಮರು ಪರೀಕ್ಷೆಗೆ ಒಳಪಡಿಸಲಾಗಿದೆ.

ರಾಜ್ಯ ಕೋವಿಡ್‌–19 ಜಿನೋಮ್‌ ಸೀಕ್ವೆನ್ಸಿಂಗ್‌ ನಿಗಾ ಸಮಿತಿಯ ಸದಸ್ಯರು, ಎವೈ 4.2 ಡೆಲ್ಟಾ ರೂಪಾಂತರಿ ವೈರಾಣು ಭೀತಿಯಿಂದ ಈ ಪರೀಕ್ಷೆ ನಡೆಸಿದ್ದಾರೆ. ರಾಜ್ಯದಲ್ಲಿ ಎವೈ 4.2 ವೈರಾಣು ಪತ್ತೆಯಾಗಿಲ್ಲ. ಆದರೆ, ಅದರ ರೂಪಾಂತರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎ222ವಿ ಮತ್ತು ವೈ145ಎಚ್‌ ರೂಪಾಂತರಗಳು ಹಲವು ಮಾದರಿಗಳಲ್ಲಿ ಕಂಡುಬಂದಿವೆ. ಈ ಎರಡೂ ಅಂಶಗಳು ಎವೈ 4.2 ವೈರಾಣುವಿನ ರೂಪಾಂತರದಲ್ಲಿ ಮಹತ್ವದ ಪಾತ್ರ ವಹಿಸಿರುವ ಪ್ರೊಟೀನ್‌ಗಳಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

‘ಜೂನ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ 1,300 ಮಾದರಿಗಳ ಮರು ಪರೀಕ್ಷೆ ನಡೆಸಲಾಗಿದೆ. ಈವರೆಗೆ ಯಾವುದೇ ಮಾದರಿಯಲ್ಲೂ ಎವೈ 4.2 ರೂಪಾಂತರಿ ವೈರಾಣು ಪತ್ತೆಯಾಗಿಲ್ಲ. 140 ಮಾದರಿಯಲ್ಲಿ ಎ222ವಿ ಮತ್ತು ನಾಲ್ಕು ಮಾದರಿಗಳಲ್ಲಿ ವೈ145ಎಚ್‌ ರೂಪಾಂತರ ಪತ್ತೆಯಾಗಿದೆ’ ಎಂದು ರಾಜ್ಯ ಕೋವಿಡ್‌–19 ಜಿನೋಮ್‌ ಸೀಕ್ವೆನ್ಸಿಂಗ್‌ ನಿಗಾ ಸಮಿತಿಯ ಸದಸ್ಯ ಡಾ.ವಿಶಾಲ್‌ ರಾವ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು