ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹23,131 ಕೋಟಿ ಅಬಕಾರಿ ತೆರಿಗೆ ಸಂಗ್ರಹ

Last Updated 22 ಏಪ್ರಿಲ್ 2021, 21:38 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಂಕಷ್ಟದ ಮಧ್ಯೆಯೂ 2020–21 ನೇ ಸಾಲಿನಲ್ಲಿ ₹23,131 ಕೋಟಿ ಅಬಕಾರಿ ತೆರಿಗೆ ಸಂಗ್ರಹಣೆ ಆಗಿದೆ.

ಆಯವ್ಯಯದಲ್ಲಿ ₹22,700 ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಗುರಿಯನ್ನು ಮೀರಿ, ಅಂದರೆ ಶೇ 101.90 ರಷ್ಟು ತೆರಿಗೆ ಸಂಗ್ರಹಿಸಲಾಗಿದೆ ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌ ತಿಳಿಸಿದ್ದಾರೆ.

ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಸಾದ್‌ ಅವರು ಪತ್ರವನ್ನು ಬರೆದಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಸರ್ಕಾರಕ್ಕೆ ಎಲ್ಲ ಮೂಲಗಳಿಂದಲೂ ಆದಾಯ ನಿಂತು ಹೋಗಿತ್ತು. ಲಾಕ್‌ಡೌನ್‌ ತೆರವು ಬಳಿಕ ನಿಗದಿತ ಗುರಿಗಿಂತಲೂ ಹೆಚ್ಚು ಆದಾಯವನ್ನು ಇಲಾಖೆ ಸಂಗ್ರಹಿಸಿದೆ. ಮದ್ಯ ಮಾರಾಟಕ್ಕಿಂತಲೂ ಮದ್ಯದ ಮೇಲಿನ ಹೆಚ್ಚಿನ ತೆರಿಗೆಯಿಂದಾಗಿ ಆದಾಯ ಹೆಚ್ಚು ಸಂಗ್ರಹವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಡಿಸೆಂಬರ್‌ ತಿಂಗಳಲ್ಲೇ ₹2,436.34 ಕೋಟಿ ಬೊಕ್ಕಸಕ್ಕೆ ಹರಿದು ಬಂದಿತ್ತು. ಆ ಬಳಿಕ ಅಬಕಾರಿ ವಲಯದಲ್ಲಿ ಆದಾಯ ಏರಿಕೆಯಾಗುತ್ತಲೇ ಬಂದಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ತೆರಿಗೆ ಸಂಗ್ರಹಕ್ಕೆ ಸರ್ಕಾರ ನಿಗದಿ ಮಾಡಿದ್ದ ಗುರಿಯನ್ನು ತಲುಪಿ, ಹೆಚ್ಚುವರಿ ಸಂಗ್ರಹವಾಯಿತು ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT