ಮಂಗಳವಾರ, ಮಾರ್ಚ್ 9, 2021
31 °C
7 ವಾಹನಗಳಲ್ಲಿ ಮೀನು ಡಬ್ಬದಲ್ಲಿ ಸಾಗಿಸಲು ಯತ್ನ

4 ಟನ್ ಗೋಮಾಂಸ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲೂರು (ಹಾಸನ): ಮೀನು ಸಾಗಣೆ ಮಾಡುವ ಡಬ್ಬಿಗಳಲ್ಲಿ 4 ಟನ್ ಗೋಮಾಂಸ ತುಂಬಿಕೊಂಡು ಮಂಗಳೂರಿಗೆ ಸಾಗಿಸಲು ಸಜ್ಜಾಗಿದ್ದ ಏಳು ವಾಹನಗಳನ್ನು ಪೊಲೀಸರು ಭಾನು ವಾರ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಆಲೂರು ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ದಿನೇಶ್‍ಕುಮಾರ್ ಅವರು ಶನಿವಾರ ರಾತ್ರಿ ಗಸ್ತು ತಿರುಗುವ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಆಧರಿಸಿ, ಇಲ್ಲಿನ ಪ್ರಕೃತಿ ನಗರದಲ್ಲಿ ಶೆಡ್ ಬಳಿ ತೆರಳಿದ್ದರು. ಆಗ, ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಸಮೀಪದ ಪೊದೆಯಲ್ಲಿ ಅವಿತು ಕುಳಿತಿದ್ದ ಮುನ್ನಾ ಎಂಬುವವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಗೋಮಾಂಸ ಸಾಗಣೆ ಪತ್ತೆಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು