ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ: ಸಂಕ್ಷಿಪ್ತ ನೋಟ ಇಲ್ಲಿದೆ

Last Updated 19 ನವೆಂಬರ್ 2021, 21:21 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲಿಯೂ ಬಂದ್‌, ಪ್ರತಿಭಟನೆ, ರ‍್ಯಾಲಿಗಳು, ರಸ್ತೆ ತಡೆ, ಮಹಾಪಂಚಾಯಿತಿಗಳು ರಾಜ್ಯದಾದ್ಯಂತ ನಡೆದಿವೆ. ರೈತ ಸಂಘಟನೆಗಳು ಈ ಹೋರಾಟದ ಮುಂಚೂಣಿಯಲ್ಲಿದ್ದವು. ಕೇಂದ್ರ ಸರ್ಕಾರದ ವಿರುದ್ಧ ನಡೆದ ಹೋರಾಟದ ಪ್ರಮುಖ ಘಟನಾವಳಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.

2020

*ಸೆಪ್ಟೆಂಬರ್‌ 21: ಸಂಯುಕ್ತ ಕಿಸಾನ್‌ ಮೋರ್ಚಾದ ಸಂಚಾಲನಾ ಸಮಿತಿ ಸದಸ್ಯ ಯೋಗೇಂದ್ರ ಯಾದವ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರ‍್ಯಾಲಿ

*ಅಕ್ಟೋಬರ್‌ 28: ಭಾರತ ಬಂದ್ ಅಂಗವಾಗಿ ಕರ್ನಾಟಕದಲ್ಲೂ ಹಲವೆಡೆ ರಸ್ತೆ ತಡೆ. ಬೆಂಗಳೂರಲ್ಲಿ ಟೌನ್ ಹಾಲ್‌ನಿಂದ ಬೃಹತ್ ಮೆರವಣಿಗೆ

*ನವೆಂಬರ್‌ 16: ಬೆಂಗಳೂರಿನ ಮೌರ್ಯ ಹೋಟೆಲ್ ಗಾಂಧಿ ಪ್ರತಿಮೆ ಬಳಿ 15 ದಿನಗಳ ನಿರಂತರ ಸತ್ಯಾಗ್ರಹ

* ಡಿಸೆಂಬರ್‌ 10: ವಿವಿಧ ಸಂಘಟನೆಗಳಿಂದ ರಾಜಭವನ ಚಲೋ. ಮೆರವಣಿಗೆಯಲ್ಲಿ ಸುಮಾರು 5000 ಜನ ಭಾಗಿ

2021

*ಜನವರಿ 26: ಟ್ರ್ಯಾಕ್ಟರ್‌ಗಳ ಪರೇಡ್‌: ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರಾರಾಜಿಸಿದ ಕೆಂಪು–ನೀಲಿ ಬಾವುಟಗಳು ಹಾಗೂ ಹಸಿರು ಶಾಲುಗಳು. ಹುಬ್ಬಳ್ಳಿ–ಧಾರವಾಡ, ಹಾವೇರಿ, ವಿಜಯಪುರ ಸೇರಿದಂತೆ ರಾಜ್ಯದ ಹಲವೆಡೆ ಕಾಂಗ್ರೆಸ್, ಎಡಪಕ್ಷ, ರೈತಸಂಘಟನೆಗಳಿಂದ ಟ್ರ್ಯಾಕ್ಟರ್‌ ರ‍್ಯಾಲಿ

*ಫೆಬ್ರುವರಿ 6: ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವೆಡೆ ಹೆದ್ದಾರಿ ತಡೆ

*ಫೆಬ್ರುವರಿ 22ರಿಂದ ಮಾರ್ಚ್‌ 1ರವರೆಗೆ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರಿಂದ ದೆಹಲಿಯ ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿ

*ಮಾರ್ಚ್‌ 20: ಶಿವಮೊಗ್ಗದ ಸೈನ್ಸ್‌ ಮೈದಾನದಲ್ಲಿ ರೈತ ಮಹಾ ಪಂಚಾಯಿತಿ. ರಾಕೇಶ್ ಟಿಕಾಯಿತ್ ಭಾಗಿ

*ಮಾರ್ಚ್‌ 21: ಹಾವೇರಿಯಲ್ಲಿ ‘ರೈತ ಮಹಾ ಪಂಚಾಯಿತಿ’

*ಮಾರ್ಚ್‌ 22: ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ‘ವಿಧಾನಸೌಧ ಚಲೋ’. ಸ್ವಾತಂತ್ರ್ಯ ಉದ್ಯಾನದ ಬಳಿ ಸಾವಿರಾರು ರೈತರು

*ಮಾರ್ಚ್‌ 24: ಪ್ರಚೋದನಕಾರಿ ಭಾಷಣ ಆರೋಪ: ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾದ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ವಿರುದ್ಧ ಹಾವೇರಿ ಹಾಗೂ ಶಿವಮೊಗ್ಗದ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

*ಮಾರ್ಚ್‌ 26 ಭಾರತ್‌ ಬಂದ್‌: ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ, ರಸ್ತೆ ತಡೆ

*ಮಾರ್ಚ್‌ 31: ಕೃಷಿ ಕಾಯ್ದೆಗಳ ವಿರುದ್ಧ ಬೆಳಗಾವಿಯಲ್ಲಿಅಖಿಲ‌ ಭಾರತ ಸಂಯುಕ್ತ ಕಿಸಾನ್ ಮೋರ್ಚಾದಿಂದ ‘ರೈತ ಮಹಾಪಂಚಾಯಿತಿ’

*ಜೂನ್‌ 26: ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರಾಜಭವನ ಚಲೋ. ರೈತ ಮುಖಂಡರ ಬಂಧನ, ಬಿಡುಗಡೆ

*ಜುಲೈ 21: ನವದೆಹಲಿಯ ಗಾಜಿಪುರ ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕದ ರೈತರು ಭಾಗಿ

*ನವೆಂಬರ್‌ 26: ಚಳವಳಿಗೆ ಒಂದು ವರ್ಷ. ಹಲವೆಡೆ ಹೆದ್ದಾರಿ ಬಂದ್‌. ಜಾನುವಾರುಗಳ ಸಮೇತ ಪ್ರತಿಭಟನೆ

*ಸೆ.27: ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಕರೆ ನೀಡಿದ್ದ ‘ಭಾರತ್ ಬಂದ್‌’ಗೆ ಹಲವು ಸಂಘಟನೆಗಳ ನೈತಿಕ ಬೆಂಬಲ. ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನಾ ರ‍್ಯಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT