ಭಾನುವಾರ, ಜನವರಿ 17, 2021
20 °C

ರಘುನಾಥ ಚ.ಹ. ಕಥೆಗೆ ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಅವರ ‘ಗೋರಿ’ ಕಥೆಗೆ ಗುಲಬರ್ಗಾ ವಿ.ವಿ. ಪ್ರಸಾರಾಂಗದ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕನ್ನಡ ಸಣ್ಣ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ದೊರಕಿದ್ದು, ಬುಧವಾರ ನಡೆದ ಸಮಾರಂಭದಲ್ಲಿ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಪ್ರಶಸ್ತಿ ಪ್ರದಾನ ಮಾಡಿದರು. 

ಇದು ಪ್ರಶಸ್ತಿ ಫಲಕ, ₹ 5 ಸಾವಿರ ನಗದು ಒಳಗೊಂಡಿದೆ.

ಅಂಕೋಲಾದ ಲೇಖಕಿ ರೇಣುಕಾ ರಮಾನಂದ ಅವರಿಗೆ ‘ಬಾಳ ಪಯಣ’ ಕಥೆಗಾಗಿ ಬೆಳ್ಳಿ ಪದಕ ಹಾಗೂ ₹ 3 ಸಾವಿರ ನೀಡಿ ಗೌರವಿಸಲಾಯಿತು.

ಡಾ.ಸಿ.ನಂದಿನಿ ರಚಿಸಿದ ‘ಬೆಳಕಿನೆಡೆಗೆ’ ಕೃತಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದರಿಂದ ಅವರಿಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.