ಗುರುವಾರ , ಆಗಸ್ಟ್ 18, 2022
25 °C

ಬೆಂಗಳೂರು: ರೈತ ಸಭೆಯಲ್ಲಿ‌ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ ಥಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಡಿಹಳ್ಳಿ‌ ಚಂದ್ರಶೇಖರ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ‌ ಮಾರಾಮಾರಿ ನಡೆದಿದ್ದು, ಮುಖಂಡ ರಾಕೇಶ್ ಟಿಕಾಯತ್‌ ಮೇಲೆ ವ್ಯಕ್ತಿಯೊಬ್ಬ ಮೈಕ್‌ನಿಂದ ಹೊಡೆದು ಮಸಿ‌ ಬಳೆದಿದ್ದಾನೆ.

ರೈತ‌ ಸಂಘದ ಮೂಲ ಹೋರಾಟಗಾರರು ಕರೆದಿದ್ದ ಸಭೆಯಲ್ಲಿ ಹಾಜರಾಗಿದ್ದ ವ್ಯಕ್ತಿಯೊಬ್ಬ, ಮೋದಿ ಹೆಸರು ಕೂಗಿದ್ದ. ಏಕಾಏಕಿ ವೇದಿಕೆಗೆ ನುಗ್ಗಿದ್ದ ವ್ಯಕ್ತಿ, ರಾಕೇಶ್ ಟಿಕಾಯತ್ ಮೇಲೆ ಮೈಕ್ ಕಿತ್ತು ಹೊಡೆದ. ನಂತರ ಎಲ್ಲರೂ ವ್ಯಕ್ತಿಯನ್ನು ಹಿಡಿದು ಥಳಿಸಿದರು. ಕುರ್ಚಿಗಳನ್ನು ಹಿಡಿದು ತೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು