ಶನಿವಾರ, ಫೆಬ್ರವರಿ 27, 2021
30 °C

‘ಶಿವನ ದೇಗುಲ ಕಟ್ಟಿದರೆ ಹಣ ಕೊಡಲು ಸಿದ್ಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಮನ ಬದಲು ಶಿವನ ದೇಗುಲ ಕಟ್ಟಿದರೆ ಹಣ ಕೊಡಲು ಸಿದ್ಧ’ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಭಾನುವಾರ ಇಲ್ಲಿ ತಿಳಿಸಿದರು.

‘ಶಿವ ಈ ದೇಶದ ಆದಿ ದೈವ. ರಾಮ ಮತ್ತು ಕೃಷ್ಣ ಇಬ್ಬರೂ ಸಮಾನತೆ ಹರಿಕಾರ ಶಿವನನ್ನು ಪೂಜಿಸುತ್ತಾರೆ. ಶಿವನ ದೇಗುಲ ಕಟ್ಟಿದರೆ ಹಣ ಕೊಡಲು ಸಿದ್ಧ ಎಂದು ರಾಮ ಮಂದಿರ ನಿರ್ಮಾಣಕ್ಕೆ ಹಣ ಕೇಳಲು ಬಂದವರಿಗೆ ಹೇಳಿದ್ದೇನೆ’ ಎಂದರು.

‘ದೇವರು ಎಂದರೆ ಸಾವಿಲ್ಲದವನು. ಕೃಷ್ಣನು ಕಾಡಿನಲ್ಲಿ ಬೇಟೆಗಾರನೊಬ್ಬನ ಬಾಣಕ್ಕೆ ಬಲಿಯಾದರೆ, ಸರಯೂ ನದಿಗೆ ಬಿದ್ದು ರಾಮ ಆತ್ಮಹತ್ಯೆ ಮಾಡಿ ಕೊಳ್ಳುತ್ತಾನೆ. ಇವರಿಬ್ಬರೂ ದೇವ ರಾಗಲು ಸಾಧ್ಯವಿಲ್ಲ. ಚಾತುರ್ವಣ್ಯವನ್ನು ಪ್ರತಿಪಾದಿಸಿದವರು ಎಂಬ ಕಾರಣಕ್ಕೆ ಇವರನ್ನು ದೇವರನ್ನಾಗಿ ಮಾಡಲಾಗಿದೆ’ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು