ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#AntiHinduCongress ಹ್ಯಾಷ್‌ಟ್ಯಾಗ್‌ ಬಳಸಿ ಸಿದ್ದರಾಮಯ್ಯ ಮೇಲೆ ಬಿಜೆಪಿ ದಾಳಿ

Last Updated 24 ಡಿಸೆಂಬರ್ 2022, 6:44 IST
ಅಕ್ಷರ ಗಾತ್ರ

ಬೆಂಗಳೂರು: ‘ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಹಿಂದೂಗಳ ನಡುವೆ ಕಂದಕ ಸೃಷ್ಟಿಸಿದವರು, ಜಯಂತಿಗಳ ಆಚರಣೆ ಮಾಡಿದವರು, ಗೋಮಾಂಸ ತಿನ್ನುವುದಾಗಿ ಹೇಳಿದವರು, ಪಿಎಫ್‌ಐ ಕಾರ್ಯಕರ್ತರ ಬಗ್ಗೆ ಮೃದು ಧೋರಣೆಯುಳ್ಳವರು, ದರ್ಗಾ‌ ತೆರವಿನ ಬಗ್ಗೆ ಸಿಡಿದವರು’ ಎಂದು ರಾಜ್ಯ ಬಿಜೆಪಿ ಘಟಕವು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮದಲ್ಲಿ ದಾಳಿ ಮಾಡಿದೆ. ಇದಕ್ಕಾಗಿ #AntiHinduCongress ಹ್ಯಾಷ್‌ ಟ್ಯಾಗ್‌ ಬಳಿಸಿದೆ.

ರಾಜ್ಯ ಬಿಜೆಪಿ ಘಟಕದ ವತಿಯಿಂದ ಅಧಿಕೃತವಾಗಿ ನಿರ್ವಹಣೆಯಾಗುತ್ತಿರುವ ಟ್ವಿಟರ್‌ ಖಾತೆಯ ಮೂಲಕ ಶನಿವಾರ ಬೆಳಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸರಣಿ ಪೋಸ್ಟ್‌ ಪ್ರಕಟಿಸಲಾಗಿದೆ.

‘ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವೀರಶೈವ ಮತ್ತು ಲಿಂಗಾಯತರ ಪ್ರತ್ಯೇಕ ಧರ್ಮ ಸ್ಥಾಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು. ಹೀಗೆ ಹಿಂದೂಗಳ ನಡುವೆ ಕಂದಕ ಸೃಷ್ಟಿಸಿ, ಒಡೆದು ಆಳುವ ನೀತಿ ಪ್ರಯೋಗಿಸಿದ್ದಕ್ಕೇ ಅಲ್ಲವೇ ಇವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು?‘ ಎಂದು ಪ್ರಶ್ನೆ ಮಾಡಿದೆ.

‘ಜಯಂತಿಯ ಕಲ್ಪನೆಯೇ ಇಲ್ಲದ ಸಮುದಾಯದಲ್ಲಿ ಜಯಂತಿ ಆಚರಿಸಿದವರು ಸಿದ್ದರಾಮಯ್ಯ. ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸಿ, ಹಿಂದೂಗಳ ಭಾವನೆ ಕೆರಳಿಸಿದರೆ ಎಷ್ಟು ದಿನ ಜನರು ಕಾಂಗ್ರೆಸ್ಸನ್ನು ಸಹಿಸುತ್ತಾರೆ? ಹಿಂದೂ ಧರ್ಮದಲ್ಲಿ ಗೋವಿಗೆ ತಾಯಿಯ ಸ್ಥಾನವಿದೆ. ಮುಖ್ಯಮಂತ್ರಿಯಾಗಿದ್ದಾಗ ಗೋಮಾಂಸ ತಿನ್ನುತ್ತೇನೆ ಎಂದು ಹೇಳಿಕೆ ನೀಡಿದವರು ಸಿದ್ದರಾಮಯ್ಯ. ಹಿಂದೂ ರಾಷ್ಟ್ರದಲ್ಲಿ ಹಿಂದೂವಾಗಿ ಹಿಂದೂಗಳನ್ನೇ ಅವಮಾನಿಸುವುದು ಎಂಥ ವಿಕೃತ ಮನಸ್ಥಿತಿ?‘ ಎಂದು ಬಿಜೆಪಿ ಟ್ವಿಟರ್‌ನಲ್ಲಿ ಮೂದಲಿಸಲಾಗಿದೆ.

‘ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸುವ, ದತ್ತಿ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಹೊರಟವರು ಸಿದ್ದರಾಮಯ್ಯ. ಹಿಂದೂಗಳನ್ನು ದಮನಿಸಲು ಹವಣಿಸಿದ್ದಕ್ಕೇ ಅಲ್ಲವೇ ನಿಮಗಿನ್ನೂ ಭದ್ರ ನೆಲೆ ಸಿಗದಿರುವುದು? ಹಿಂದೂ ಕಾರ್ಯಕರ್ತರ ವಿರುದ್ಧ ಹೋರಾಡಿ ಎಂದವರು ಸಿದ್ದರಾಮಯ್ಯ. ಇವರ ಬೆಂಬಲದಿಂದ ದೇಶದ್ರೋಹಿ ಪಿಎಫ್ಐ ಸದಸ್ಯರು, ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದರು.‌ ಪಿಎಫ್‌ಐ ಕಾರ್ಯಕರ್ತರ ಬಗ್ಗೆ ಮೃದು ಧೋರಣೆ ತಳೆದು ಪ್ರಕರಣಗಳನ್ನು ಕೈ ಬಿಟ್ಟಿದ್ದಕ್ಕೇ ಅಲ್ಲವೇ ಇನ್ನೂ ಕುಕ್ಕರ್ ಬ್ಲಾಸ್ಟ್ ಆಗಿದ್ದು? ಎಂದು ಹೇಳಲಾಗಿದೆ.

‘ಹುಬ್ಬಳ್ಳಿ-ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ, ದರ್ಗಾ‌ ತೆರವಿನ ಬಗ್ಗೆ ಸಿಡಿದಿದ್ದೇಕೆ? ಜನರಿಗೆ ಇದೆಲ್ಲ ಸ್ಪಷ್ಟವಾಗಿ ಗೋಚರವಾಗಿದ್ದಕ್ಕೇ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ’ ಎಂದು ಗೇಲಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT