ಆಗ ಅಪಪ್ರಚಾರ ಮಾಡಿ, ಈಗ ಲಸಿಕೆಗಾಗಿ ಭಿಕ್ಷೆ ಬೇಡ್ತಿವಿ ಎನ್ನುತ್ತೀರಿ: ರಾಮದಾಸ್

ಬೆಂಗಳೂರು: ಅಂದು ಲಸಿಕೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಬರುವಂತೆ ಮಾತನಾಡಿ, ಇಂದು ಲಸಿಕೆಗೋಸ್ಕರ ಭಿಕ್ಷೆ ಬೇಡ್ತಿವಿ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಶಾಸಕ ರಾಮದಾಸ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ʼಡಿ.ಕೆ ಶಿವಕುಮಾರ್ ಅವರೇ ಒಂದು ಲಸಿಕೆ ಬರುತ್ತದೆ ಎಂದರೆ ಅದನ್ನು ಹಲವು ಬಾರಿ ಪರೀಕ್ಷೆ ಮಾಡಿರುತ್ತಾರೆ, ಆ ಪರೀಕ್ಷೆಗಳಲ್ಲಿ ಯಶಸ್ವಿಯಾದಾಗ ಮಾತ್ರ ಮಾನವ ಪ್ರಯೋಗ ಮಾಡುತ್ತಾರೆ. ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ನೀಡಿದಕ್ಕಾಗಿಯೇ ಇಂದು ಅವರು ಕೊರೊನಾ ಸೋಂಕಿಗೆ ತುತ್ತಾಗದೆ ಲಕ್ಷಾಂತರ ರೋಗಿಗಳ ಸೇವೆ ಮಾಡುತ್ತಿದ್ದಾರೆʼ ಎಂದು ತಿವಿದಿದ್ದಾರೆ.
ಡಿ.ಕೆ ಶಿವಕುಮಾರ್ ಅವರೇ ಒಂದು ಲಸಿಕೆ ಬರುತ್ತದೆ ಎಂದರೆ ಅದನ್ನು ಹಲವು ಬಾರಿ ಪರೀಕ್ಷೆ ಮಾಡಿರುತ್ತಾರೆ, ಆ ಪರೀಕ್ಷೆಗಳಲ್ಲಿ ಯಶಸ್ವಿಯಾದಾಗ ಮಾತ್ರ ಮಾನವ ಪ್ರಯೋಗ ಮಾಡುತ್ತಾರೆ.
ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ನೀಡಿದಕ್ಕಾಗಿಯೇ ಇಂದು ಅವರು ಕೊರೊನಾ ಸೋಂಕಿಗೆ ತುತ್ತಾಗದೆ ಲಕ್ಷಾಂತರ ರೋಗಿಗಳ ಸೇವೆ ಮಾಡುತ್ತಿದ್ದಾರೆ.
1/2 pic.twitter.com/l7g8Y6lkXu
— S A Ramadass (@ramadassmysuru) June 7, 2021
ಮತ್ತೊಂದು ಟ್ವೀಟ್ನಲ್ಲಿ, ನಿಮ್ಮ ಹೇಳಿಕೆಗಳನ್ನು ರಾಜ್ಯದ ಜನರು ವೀಕ್ಷಿಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಅಂದು ಲಸಿಕೆ ಬಗ್ಗೆ ತಪ್ಪು ಕಲ್ಪನೆ ಬರುವ ರೀತಿಯಲ್ಲಿ ಮಾತನಾಡಿದ ನೀವು ಇಂದು ಲಸಿಕೆಗೋಸ್ಕರ ಭಿಕ್ಷೆ ಬೇಡ್ತಿವಿ ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಹಾಗೂ ಇವೆಲ್ಲವನ್ನು ರಾಜ್ಯದ ಜನ ವೀಕ್ಷಿಸುತ್ತಿದ್ದಾರೆ.
2/2@BJP4Karnataka @BJPKarSMITCell— S A Ramadass (@ramadassmysuru) June 7, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.