ಶನಿವಾರ, ಡಿಸೆಂಬರ್ 4, 2021
23 °C

ಹಿರಿಯ ಯುವ ನಾಯಕನ ಬುದ್ಧಿ ಬೆಳೆಯಲೇ ಇಲ್ಲ: ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ವ್ಯಂಗ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದಲ್ಲಿ ಸಾಕಷ್ಟು ಶಾಲೆಗಳಿದ್ದರೂ 50 ವರ್ಷ ದಾಟಿದ ಅತಿ ಹಿರಿಯ ಯುವ ನಾಯಕ ಭಾರತದಲ್ಲಿ ಓದಲೇ ಇಲ್ಲ. ವಯಸ್ಕರ ಶಿಕ್ಷಣ ಇದ್ದರೂ ಅವರ ಬುದ್ಧಿ ಬೆಳೆಯಲೇ ಇಲ್ಲ’ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

ಈ ಮೂಲಕ, ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿದ್ದರೂ ಮೋದಿ ಓದಿರಲಿಲ್ಲ ಎಂಬ ‘ಕೈ’ ಪಕ್ಷದ ಟೀಕೆಗೆ ತಿರುಗೇಟು ಕೊಟ್ಟಿದೆ.

ಓದಿ: ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೆ ಮೋದಿ ಓದಿರಲಿಲ್ಲ: ಕಾಂಗ್ರೆಸ್ ಲೇವಡಿ

‘ತಾತ, ಮುತ್ತಾತ, ಅಪ್ಪ ಪ್ರಧಾನಿ ಆಗಿದ್ದಾರೆ ಎಂಬ ಒಂದೇ ಅರ್ಹತೆಯ ಆಧಾರದ ಮೇಲೆ ತಾನು ಪ್ರಧಾನಿಯಾಗುತ್ತೇನೆ ಎಂದು ಭಿಕ್ಷುಕನಂತೆ ಅಲೆಯುತ್ತಿದ್ದಾರೆ’ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

‘ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ. ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ. ಬಾರ್‌ನಲ್ಲಿ ಡ್ಯಾನ್ಸ್‌ ಮಾಡಲಿಲ್ಲ. ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ. ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ತಿರುಗೇಟು ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು