ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಒಂದೆರಡು ಸಚಿವರ, 10ರಿಂದ 15 ಶಾಸಕರ ಟಿಕೆಟ್ ಕಡಿತ: ಮಾಲೀಕಯ್ಯ ಗುತ್ತೇದಾರ

Last Updated 23 ಮಾರ್ಚ್ 2023, 8:31 IST
ಅಕ್ಷರ ಗಾತ್ರ

ಕಲಬುರಗಿ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದೆರಡು ಸಚಿವರ, 10ರಿಂದ 15 ಶಾಸಕರ ಟಿಕೆಟ್ ಕಡಿತ ಆಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರಿಂದ ದೂರವಾದ ಎಂತಹದ್ದೆ ಪ್ರಭಾವಿ ಶಾಸಕ, ಸಚಿವರಾಗಿರಲಿ ಮುಲಾಜಿಲ್ಲದೆ ಅವರ ಟಿಕೆಟ್ ಕಡಿತ ಮಾಡಲಾಗುತ್ತದೆ. ವಿಜಯ ಸಂಕಲ್ಪ ಯಾತ್ರೆಯ ವೇಳೆ ಹಾಲಿ ಶಾಸಕರ, ಟಿಕೆಟ್ ಆಕಾಂಕ್ಷಿಗಳು ಪರವಾಗಿ ಸಾಕಷ್ಟು ಹೇಳಿಕೆಗಳು ಹೊರ ಬಂದಿವೆ. ಜನರಿಂದ ಬಂದ ಎಲ್ಲ ತರಹದ್ದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಜನರಿಗೆ ಹತ್ತಿರ ಮತ್ತು ಪಕ್ಷಕ್ಕೆ ನಿಷ್ಠೆಯಿಂದ ಇರುವವರನ್ನು ಪರಿಗಣಿಸಿ ಟಿಕೆಟ್ ನೀಡಲಾಗುತ್ತದೆ’ ಎಂದರು.
‘ಮುಂದಿನ ಬಾರಿ ಮತ್ತೆ ಬಿಜೆಪಿ ಸರ್ಕಾರ ತರಬೇಕಾದರೆ ಟಿಕೆಟ್ ಕಡಿತದ ತೀರ್ಮಾನ ಅವಶ್ಯವಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕಡಿತ ಮಾಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಸ್ಪಷ್ಟನೆ ನೀಡಿದರು.

‘ನಾನು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳುತ್ತೇನೆ ಎಂಬ ಮಾತಗಳು ಕೇಳಿಬರುತ್ತಿವೆ. ಇದು ಸತ್ಯಕ್ಕೆ ದೂರವಾದ ಮಾತು. ಟಿಕೆಟ್ ಕೊಡಲಿ, ಬಿಡಲಿ ನಾನು ಬಿಜೆಪಿಯಲ್ಲಿ ಇರುತ್ತೇನೆ. ಅಫಜಲಪುರದಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರು ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇನೆ’ ಎಂದರು.

‘ನಾನು ಬೆಂಕಿ ಇದ್ದಂತ. ನೇರ ನುಡಿ, ನಿಷ್ಠರವಾದ ಮಾತುಗಳಿಗೆ ಹೆಸರುವಾಸಿ. ಕಾಂಗ್ರೆಸ್‌ನವರಲ್ಲಿ ನನ್ನ ಸಂಪರ್ಕಕ್ಕೆ ಬರುವಷ್ಟು ಧೈರ್ಯ ಇಲ್ಲ. ಪಕ್ಷದ ಬಗ್ಗೆ ಏನಾದರು ಅಸಮಾಧಾನ ಇದ್ದರೆ ನಾನೇ ನೇರವಾಗಿ ಹೇಳುತ್ತೇನೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ನನ್ನ ಮುಂದೆ ಇಲ್ಲ’ ಎಂದು ಸ್ಷಷ್ಟನೆ ನೀಡಿದರು.

‘ಕೋಲಿ ಸಮಾಜದ ಮುಖಂಡ ಬಾಬುರಾವ ಚಿಂಚನಸೂರ ಅವರು ಕಾಂಗ್ರೆಸ್ ಸೇರ್ಡೆಯಿಂದ ಬಿಜೆಪಿಗೆ ಯಾವುದೇ ಹಾನಿ ಇಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್ ಸೇರಿದ್ದಾರೆ. ಇದು ರಾಜಕೀಯ ಜೀವನದ ಕೊನೆಯ ಅಧ್ಯಾಯ ಆಗಲಿದೆ’ ಎಂದು ಅವರು ಟೀಕಿಸಿದರು.

‘ಇದುವರೆಗೂ ಸಮಾಜವನ್ನು ತನ್ನ ರಾಜಕೀಯ ಸಾಧನೆಗಾಗಿ ಬೆಳೆಸಿಕೊಂಡು, ಯಾವೊಬ್ಬ ನಾಯಕರನ್ನು ಬೆಳಸಿಲಿಲ್ಲ. ಸಮಾಜದ ಬಗ್ಗೆ ಕಾಳಜಿಯೂ ಇರಲಿಲ್ಲ. ಗುರುಮಠಕಲ್‌ನಲ್ಲಿ ಸೋಲುವ ಭಯದಿಂದ ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ. ಇದನ್ನು ಕೋಲಿ ಸಮುದಾಯದ ಹಲವು ಮುಖಂಡರು ನನಗೆ ಹೇಳಿದ್ದಾರೆ. ಪಕ್ಷ ತೋರೆದಿದ್ದಕ್ಕೆ ಸಂತಸವೂ ಅವರು ವ್ಯಕ್ತಪಡಿಸಿದ್ದಾರೆ’ ಎಂದು ಅವರು ಹೇಳಿದರು.

‘ಸ್ವಾಭಿಮಾನ ವ್ಯಕ್ತಿತ್ವದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಾಬುರಾವ ಚಿಂಚನಸೂರ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಮಯವೇ ಇಲ್ಲ. ಇದೆಲ್ಲ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಕೆಲಸ ಇರಬಹುದು’ ಎಂದರು.

‘ಸಹೋದರ ನಿತಿನ್ ಗುತ್ತೇದಾರಗೆ ನನ್ನ ರಾಜಕೀಯ ಅನುಭವದಷ್ಟು ವಯಸ್ಸಾಗಿಲ್ಲ. ಜಿಲ್ಲೆಯ ಸ್ವಪಕ್ಷದ ಕೆಲವು ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಅವನೊಬ್ಬ ಬಾಲಿಶ’ ಎಂದು ಮಾಲೀಕಯ್ಯ ಗುತ್ತೇದಾರ ವ್ಯಂಗ್ಯವಾಡಿದರು.

‘ಅವನಿಗೆ ಬುದ್ಧಿ ಇದಿದ್ದರೆ ಈ ಚುನಾವಣೆಯಲ್ಲಿ ನನಗೆ ಸಹಕಾರ ಕೊಟ್ಟಿದ್ದರೇ ಮುಂದಿನ ಚುನಾವಣೆಯಲ್ಲಿ ಅವನಿಗೆ ಉತ್ತಮ ರಾಜಕೀಯ ಭವಿಷ್ಯವಿತ್ತು. ನನ್ನ ನಿವೃತ್ತಿಯ ಬಳಿಕ ಅವನಿಗೆ ನನ್ನ ಸ್ಥಾನ ಬಿಟ್ಟುಕೊಡುತ್ತಿದೆ. ನನ್ನ ಮುಂದೆ ಸ್ಪರ್ಧೆಯಾಗಿ ನಿಂತವನ ಪರವಾಗಿ ಕ್ಷೇತ್ರದ ಜನರು ನಿಲುವುದಕ್ಕೂ ಯೋಚಿಸುತ್ತಾರೆ. ಒಂದು ವೇಳೆ ಚುನಾವಣೆಯಲ್ಲಿ ಸೋತರು ನಾನೇ ನಾಯಕ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ್, ಶೋಭಾ ಬಾಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT