ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳಗಾವಿ ಗಡಿ ವಿವಾದಕ್ಕೆ ಬೊಮ್ಮಾಯಿ ಕುಮ್ಮಕ್ಕು’- ಬಿ.ಕೆ. ಹರಿಪ್ರಸಾದ್

‘ಯಡಿಯೂರಪ್ಪಗೆ ಯೂಸುಫ್ ಖಾನ್ ಎನ್ನಬಹುದೇ?-’
Last Updated 5 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ, ಮಹಾರಾಷ್ಟ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಬೆಳಗಾವಿ ಗಡಿ ವಿವಾದ ಈ ತ್ರಿಬಲ್ ಎಂಜಿನ್ ಸರ್ಕಾರ ಮಾಡಿರುವ ಹೊಂದಾಣಿಕೆ ರಾಜಕೀಯ. ಇದರ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕುಮ್ಮಕ್ಕಿದೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಗಡಿ ತಕರಾರಿನ ಹಿಂದೆ, ಬೆಳಗಾವಿ ಅಧಿವೇಶನದಲ್ಲಿ ಬೇರೆ ವಿಷಯಗಳು ಚರ್ಚೆಯಾಗದಂತೆ ತಡೆಯುವ ಹುನ್ನಾರವಿದೆ. ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಬಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಕಳೆದ ಬೆಳಗಾವಿ ಅಧಿವೇಶನ ಸಮಯದಲ್ಲಿ ಮಹಾರಾಷ್ಟ್ರದ ಗೃಹ ಸಚಿವರು ಬೆಳಗಾವಿಯಲ್ಲಿ ಉಳಿದುಕೊಂಡಿದ್ದರು. ಆದರೆ, ನಮ್ಮ‌ ಗೃಹ ಸಚಿವರಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ’ ಎಂದರು.

ಯಡಿಯೂರಪ್ಪಗೆಯೂಸುಫ್ ಖಾನ್ ಎನ್ನಬಹುದೇ?: ‘ಹೆಸರುಗಳನ್ನ ಬದಲಾಯಿಸಿ ಅವಹೇಳನ ಮಾಡುವುದು ಬಿಜೆಪಿಯ ಸಂಪ್ರದಾಯ. ಈ ಹಿಂದೆ ಪ್ರಧಾನಿ ಮೋದಿಯವರೇ, ಸಿದ್ದರಾಮಯ್ಯನವರ ಹೆಸರು ಬದಲಾಯಿಸಿ ಹೇಳಿಕೆ ಕೊಟ್ಟಿದ್ದರು. ಈಗ ಅವರ ಚೇಲಾಗಳು ಹೆಸರು ಬದಲಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹೆಸರಿಡಲು ಸಿ.ಟಿ. ರವಿ ಯಾರು? ಹಾಗಿದ್ದರೆ, ಟಿಪ್ಪು ಟೋಪಿ ಹಾಕಿದ್ದ ಯಡಿಯೂರಪ್ಪ, ಈಶ್ವರಪ್ಪ ಅವರನ್ನು ಏನೆಂದು ಕರೆಯಬೇಕು? ಯೂಸುಫ್ ಖಾನ್ ಎಂದು ಯಡಿಯೂರಪ್ಪ ಅವರನ್ನು ಕರೆಯಬಹುದೇ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT