ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೋಧಿವೃಕ್ಷ’ ಪ್ರಶಸ್ತಿಗೆ ಪತ್ರಕರ್ತ ‍ಪಿ. ಸಾಯಿನಾಥ್ ಆಯ್ಕೆ

Last Updated 5 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಅಂಬೇಡ್ಕರ್‌ ಸ್ಪೂರ್ತಿಧಾಮ ಸಂಸ್ಥೆ ನೀಡುವ 2021ನೇ ಸಾಲಿನ ‘ಬೋಧಿವೃಕ್ಷ’ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪತ್ರಕರ್ತ ‍ಪಿ. ಸಾಯಿನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.‌

ಈ ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ. ಬೋಧಿವರ್ಧನ ಪ್ರಶಸ್ತಿಗೆ ಸಿಎಎ ವಿರುದ್ಧದ ಹೋರಾಟದಲ್ಲಿ ಶಾಹಿನ್‌ ಬಾಗ್ ದಾದಿ ಎಂದೇ ಹೆಸರಾದ ಬಿಲ್ಕಿಸ್ ಬಾನೊ, ರೈತ ಹೋರಾಟಗಾರ ಜೆ.ಎಂ. ವೀರಸಂಗಯ್ಯ, ಸಾಮಾಜಿಕ ಹೋರಾಟಗಾರ ವಿ. ನಾಗರಾಜ್, ಅಲೆಮಾರಿ ಸಮುದಾಯ ಮತ್ತು ಕೂಲಿ ಕಾರ್ಮಿಕರ ಪರ ಕೆಲಸ ಮಾಡುತ್ತಿರುವ ಶಾರದಾ ಮಾಳಗಿ ಮತ್ತು ಜೀವಪರ ಕಾಳಜಿಯೊಂದಿಗೆ ದುಡಿಯುತ್ತಿರುವ ‘ಮರ್ಸಿ ಏಂಜೆಲ್ಸ್’ ಸ್ವಯಂ ಸೇವಕರ ಗುಂಪನ್ನು ಆಯ್ಕೆ ಮಾಡಲಾಗಿದೆ. ಬೋಧಿವರ್ಧನ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ.

ಇದೇ 8ರಿಂದ ಅಂಬೇಡ್ಕರ್ ಹಬ್ಬ ಆರಂಭವಾಗಲಿದೆ. ಪ್ರತಿದಿನ ಸಂಜೆ 6 ಗಂಟೆಗೆ ವಿಶೇಷ ವೆಬಿನಾರ್ ಉಪನ್ಯಾಸ ಸರಣಿ ನಡೆಯಲಿದ್ದು, 14ರಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ‘ಸ್ಪೂರ್ತಿಧಾಮ’ ಸಂಸ್ಥೆ ಅಧ್ಯಕ್ಷ ಎಸ್.ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಚಿಂತಕ ಪ್ರೊ. ರವಿವರ್ಮ ಕುಮಾರ್ ಭಾಗವಹಿಸುವರು ಎಂದು ಸ್ಪೂರ್ತಿಧಾಮ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT