ಸೋಮವಾರ, ಸೆಪ್ಟೆಂಬರ್ 27, 2021
21 °C

ವೈಯಕ್ತಿಕ ಕೆಲಸಕ್ಕೆ‌ ದೆಹಲಿಗೆ ಬಂದಿದ್ದೆ: ಯೋಗೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 'ನಾನು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದು, ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ' ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಶುಕ್ರವಾರ ರಾತ್ರಿ ದಿಢೀರ್ ಇಲ್ಲಿಗೆ ಬಂದಿರುವ ಅವರು, ಶನಿವಾರ ಮಧ್ಯಾಹ್ನ‌ ಇಲ್ಲಿನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಯಕತ್ವ ಬದಲಾವಣೆಗೆ ಸಂಬಂಧಿಸಿದ‌ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿರುವುದಾಗಿ ಶುಕ್ರವಾರ ಬೆಂಗಳೂರಿನಲ್ಲಿ ಹೇಳಿಕೆ‌ ನೀಡಿದ್ದ ಅವರು, ಫಲಿತಾಂಶ ಬರಲಿ ಈ ಬಗ್ಗೆ ಚರ್ಚೆ‌ ಬೇಡ ಎಂದರು.

ಇದನ್ನೂ ಓದಿ: 

'ಪ್ರತಿ ಬಾರಿ ನಾನು ದೆಹಲಿಗೆ ಬಂದಾಗ‌ ರಾಜಕೀಯ ಸ್ಪರ್ಶ ನೀಡಲಾಗುತ್ತದೆ. ಆದರೆ, ಈಗ  ವೈಯಕ್ತಿಕ ಕೆಲಸಕ್ಕೆ‌ ಬಂದಿದ್ದು, ರಾಜಕೀಯ ಉದ್ದೇಶ ಇಲ್ಲ' ಎಂದರು.

ಸಂಜೆ ಬೆಂಗಳೂರಿಗೆ ವಾಪಸ್ ತೆರಳುವುದಾಗಿ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು