ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2020–21 ಹಾಗೂ 2021-22ನೇ ಸಾಲಿನ ‘ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ’, ‘ಜಾನಪದಶ್ರೀ’ ಸೇರಿ 14 ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ.
‘ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ’ಗೆ ಮಹಾರಾಷ್ಟ್ರದ ಭಿಕು ರಾಮ್‌ಜಿ ಇದಾತೆ ರತ್ನಗಿರಿ ಹಾಗೂ ಧಾರವಾಡದ ವೀರಣ್ಣ ರಾಜೂರು ಅವರನ್ನು ಆಯ್ಕೆ ಮಾಡಲಾಗಿದೆ. ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ಧಾರವಾಡದ ಗಾಯತ್ರಿ ದೇಸಾಯಿ, ಕಲಬುರಗಿಯ ವಿಜಯ್ ಹಾಗರ ಗುಂಡಿಗಿ ಆಯ್ಕೆಯಾಗಿದ್ದಾರೆ.
‘ಜಕಣಾಚಾರಿ ಪ್ರಶಸ್ತಿ’ಗೆ ವಿಜಯ ನಗರದ ಹುಸೇನಿ, ಮೈಸೂರಿನ ಶ್ಯಾಮಸುಂದರ್ ಭಟ್, ‘ಜಾನಪದಶ್ರೀ ಪ್ರಶಸ್ತಿ’ಗೆ ರಾಯಚೂರಿನ ಮಾರೆಪ್ಪ ದಾಸರ, ಉ. ಕನ್ನಡದ ಹುಸೇನಾ ಬಿ. ಬುಡೇನ್, ರಾಮನಗರದ ಅಪ್ಪಗೆರೆ ತಿಮ್ಮರಾಜು, ಮೈಸೂರಿನ ಕುಮಾರಸ್ವಾಮಿ ಭಾಜನರಾಗಿದ್ದಾರೆ. ‘ಚೌಡಯ್ಯ ಪ್ರಶಸ್ತಿ’ಗೆ ಎಂ.ವಾಸುದೇವ ಮೋಹಿತ, ನವದೆಹಲಿಯ ಹರಿಪ್ರಸಾದ್ ಚೌರಾಸಿಯಾ, ‘ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’ಗೆ ಪಾವಗಡದ ಜಪಾನಂದ ಸ್ವಾಮೀಜಿ, ಕೇರಳದ ಸದಾನಂದ ಮಾಸ್ಟರ್, ‘ಕುಮಾರವ್ಯಾಸ ಪ್ರಶಸ್ತಿ’ಗೆ ಶಿವಮೊಗ್ಗದ ರಾಜಾರಾಂ ಮೂರ್ತಿ, ಮೈಸೂರಿನ ಎಂ.ಕೆ.ರಾಮಶೇಷನ್, ‘ಶಾಂತಲಾ ನಾಟ್ಯರಾಣಿ ಪ್ರಶಸ್ತಿ’ಗೆ ಬೆಂಗಳೂರಿನ ಎಂ.ಆರ್.ಕೃಷ್ಣಮೂರ್ತಿ, ಬಿ.ಎಸ್.ಸುನಂದಾದೇವಿ, ‘ಸಂತ ಶಿಶುನಾಳ ಶರೀಫರ ಪ್ರಶಸ್ತಿ’ಗೆ ದಕ್ಷಿಣ ಕನ್ನಡದ ಪುತ್ತೂರು ನರಸಿಂಹ ನಾಯಕ್ ಹಾಗೂ ಚಂದ್ರಶೇಖರ ಜೋಯಿಷಾ ಆಯ್ಕೆಯಾಗಿದ್ದಾರೆ. ‘ನಿಜಗುಣ ಪುರಂದರ ಪ್ರಶಸ್ತಿ’ಗೆ ಬೆಂಗಳೂರಿನ ಎಂ.ಎಸ್.ಶೀಲಾ, ‘ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಗೆ ಕಾಸರಗೋಡಿನ ರಮಾನಂದ ಬನಾರಿ, ಕುಪ್ಪಂನ ಎಂ.ಎನ್.ವೆಂಕಟೇಶ್, ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ಗೆ ಮೈಸೂರಿನ ಕೌಸಲ್ಯಾ ಧರಣೀಂದ್ರ, ಧಾರವಾಡದ ಮಾಲತಿ ಪಟ್ಟಣಶೆಟ್ಟಿ, ‘ಬಿ.ವಿ.ಕಾರಂತ ಪ್ರಶಸ್ತಿ’ಗೆ ಬೆಂಗಳೂರಿನ ಬಿ.ವಿ.ರಾಜಾರಾಂ, ವಿಜಯನಗರದ ಅಬ್ದುಲ್ಲ ಪಿಂಜಾರ, ‘ಗುಬ್ಬಿ ವೀರಣ್ಣ ಪ್ರಶಸ್ತಿ’ಗೆ ಚಿತ್ರದುರ್ಗದ ಕುಮಾರಸ್ವಾಮಿ ,ಕೊಪ್ಪಳದ ಬಾಬಣ್ಣ ಕಲ್ಮನಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹5 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.