ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಸುರಕ್ಷತೆಯ ಜಾಲದ ವಿಸ್ತರಣೆ ಅಗತ್ಯ: ಸವರಾಜ ಬೊಮ್ಮಾಯಿ

Last Updated 11 ಡಿಸೆಂಬರ್ 2021, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ಸೈಬರ್‌ ಅಪರಾಧ ಜಾಲ ಬಹಳ ದೊಡ್ಡದಾಗಿ ಬೆಳೆಯುತ್ತಿದೆ. ಅದನ್ನು ನಿಯಂತ್ರಿಸಲು ಸೈಬರ್‌ ಸುರಕ್ಷತೆಯ ಜಾಲವೂ ವಿಸ್ತರಣೆಯಾಗಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯೋಜಿಸಿರುವ ‘ಸೈಬರ್‌ ಸುರಕ್ಷತೆ ಅಭಿಯಾನಕ್ಕೆ’ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಮಾದಕ ವಸ್ತು ಪೂರೈಕೆ ಜಾಲ, ಮಾನವ ಕಳ್ಳಸಾಗಣೆ, ಆರ್ಥಿಕ ಪರಾಧಗಳ ಜತೆ ಸೈಬರ್‌ ಅಪರಾಧಗಳಿಗೆ ನಂಟಿದೆ. ಈ ಜಾಲವನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರದ ನೆರವಿನಲ್ಲಿ ಸೈಬರ್‌ ಸುರಕ್ಷತೆಯನ್ನು ವಿಸ್ತರಿಸಲು ಪ್ರಯತ್ನಿಸಲಾಗುವುದು’ ಎಂದರು.

‘ಡಿಜಿಟಲ್‌ ಸಾಕ್ಷರತೆಯಿಂದ ಸೈಬರ್‌ ಅಪರಾಧಗಳನ್ನು ತಡೆಯಬಹುದು. ಸೈಬರ್‌ ಅಪರಾಧಿಗಳು ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿದಾಗ ಖಾತೆದಾರರ ಮೊಬೈಲ್‌ ಸಂಖ್ಯೆಗೆ ಸಿಐಆರ್‌ ಸಂಖ್ಯೆ ಬರುತ್ತದೆ. ತಕ್ಷಣವೇ ಅದರ ಮಾಹಿತಿಯೊಂದಿಗೆ ದೂರು ನೀಡಿದರೆ ಹಣ ಲಪಟಾಯಿಸಿದವರಿಗೆ ಸಂಬಂಧಿಸಿದ ಎಲ್ಲ ಖಾತೆಗಳನ್ನೂ ಸ್ಥಗಿತಗೊಳಿಸಲು ಸಾಧ್ಯವಿದೆ. ಅಂಥ ವ್ಯವಸ್ಥೆಯನ್ನು ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಪರಿಚಯಿಸಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬರೂ ಸೈಬರ್‌ ಸುರಕ್ಷತೆಯ ಬಗ್ಗೆ ಅರಿವು ಹೊಂದಬೇಕು. ತಮ್ಮ ಬ್ಯಾಂಕ್‌ ಖಾತೆಗಳು, ಡಿಜಿಟಲ್‌ ಸ್ವರೂಪದ ದಾಖಲೆಗಳ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು. ಡಿಜಿಟಲೀಕರಣದ ಪ್ರಕ್ರಿಯೆಯಲ್ಲಿ ಕೋಡಿಂಗ್‌ನಲ್ಲಿ ‍ಪ್ರಮಾದಗಳು ಆಗದಂತೆ ಮುನ್ನೆಚ್ಚರಿಕೆ ಇರಬೇಕು’ ಎಂದು ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ, ಸೈಬರ್‌ ಸುರಕ್ಷತಾ ಅಭಿಯಾನದ ರಾಯಭಾರಿಯಾಗಿರುವ ಚಿತ್ರನಟ ರಮೇಶ್‌ ಅರವಿಂದ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT