ಬೆಳಗಾವಿ: 'ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ ಇಲ್ಲ. ಮುಂದಿನ ಎರಡು ವರ್ಷ ಅವರೇ ಮುಂದುವರಿಯುತ್ತಾರೆ' ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕದಲ್ಲಿ ಗುರುವಾರ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ' ಎಂದೂ ತಿಳಿಸಿದರು.

'ನಾವು ಯಡಿಯೂರಪ್ಪ ಹಾಗೂ ಅಮಿತ್ ಶಾ ನಂಬಿ ಬಿಜೆಪಿಗೆ ಬಂದಿದ್ದೇವೆ' ಎಂದರು.

ಕೆಲವು ಶಾಸಕರು ಯಡಿಯೂರಪ್ಪ ವಿರುದ್ಧ ಅಪಸ್ವರ ತಗೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಬಿಜೆಪಿಯಲ್ಲಿರುವ ಎಲ್ಲ ಶಾಸಕರೂ ಕುಟುಂಬ ಇದ್ದಂತೆ. ಯಡಿಯೂರಪ್ಪ ಅವರು ಎಲ್ಲರನ್ನೂ ಕರೆದು ಮಾತನಾಡಬೇಕು ಎಂದು ಮನವಿ ಮಾಡುತ್ತೇನೆ' ಎಂದರು.

'ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಏನೇನೋ ಹೇಳುತ್ತಿರುತ್ತಾರೆ' ಎಂದು ಟೀಕಿಸಿದರು.

'ಈ ತಿಂಗಳ 18ರ ನಂತರ ಯಡಿಯೂರಪ್ಪ ಅವರು ಹೊಸ ಯಡಿಯೂರಪ್ಪ ಆಗಿ ರಾಜ್ಯದ ಮೂಲೆ ಮೂಲೆಗೆ ಪ್ರವಾಸ ಮಾಡುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಸಿ.ಪಿ. ಯೋಗೇಶ್ವರ ಈಗಲೂ ನನ್ನ ಸ್ನೇಹಿತ. ಅವರಿಗೆ ಏನಾದರೂ ತಪ್ಪು ಗ್ರಹಿಕೆ ಇದ್ದರೆ ಯಡಿಯೂರಪ್ಪ ಮುಂದೆ ಕುಳಿತು ಮಾತನಾಡಿ ಸರಿಪಡಿಸಿಕೊಳ್ಳಬೇಕು ಎಂದು ಕೋರುತ್ತೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.