ಬೆಂಗಳೂರು: ಹುಬ್ಬಳ್ಳಿ ನಗರದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆ ಕಾಂಗ್ರೆಸ್ ಪ್ರಯೋಜಕತ್ವದಲ್ಲೇ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

ಹುಬ್ಬಳ್ಳಿ ಗಲಭೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಲೀಮ್ ಅಹಮದ್ ಅವರಿಗೆ ಟಿಕೆಟ್ ನೀಡಿದಾಗ ಹುಬ್ಬಳ್ಳಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅವರಿಗೆ ಅಸಮಾಧಾನವಾಗಿತ್ತು. ಹುಬ್ಬಳ್ಳಿ ಗಲಭೆ ಈ ಅಸಮಾಧಾನದ ಮುಂದುವರೆದ ಭಾಗವೇ?, ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿರಬಹುದು’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ:ಪ್ರಚೋದನಕಾರಿ ಪೋಸ್ಟ್: ಹಳೇ ಹುಬ್ಬಳ್ಳಿ ಉದ್ವಿಗ್ನ, ಪೊಲೀಸರ ಮೇಲೆ ಕಲ್ಲು ತೂರಾಟ

‘ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಭಾಗಿಯಾಗಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಶಿಕ್ಷಕಿಯೊಬ್ಬರು ರಕ್ತಪಾತದ ಬೆದರಿಕೆ ಹಾಕಿದ್ದರು. ಕಾಂಗ್ರೆಸ್ ಆಯೋಜಿಸಿದ್ದ ಈ ಪ್ರತಿಭಟನೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆಯಲ್ಲಿ ಹೇಳಿದ್ದನ್ನೇ ಮಾಡಿದ್ದಾರೆ. ವ್ಯವಸ್ಥಿತ ಪಿತೂರಿಯಿದು!’ ಎಂದು ಬಿಜೆಪಿ ದೂರಿದೆ.

ಓದಿ...ಗಲಭೆ ನಿಯಂತ್ರಿಸಲು ಪೊಲೀಸ್ ವಾಹನ ಹತ್ತಿದ್ದೆ, ಪ್ರಚೋದಿಸಲು ಅಲ್ಲ:ಅಲ್ತಾಫ್

‘ಒಂದು ಕಡೆ, ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಮನವಿ ಮಾಡುವುದು. ಇನ್ನೊಂದು ಕಡೆ, ಲೋಡುಗಟ್ಟಲೆ ಕಲ್ಲು ಸಂಗ್ರಹಿಸಿ ಕಲ್ಲು ತೂರಾಟ ಮಾಡಿದವರನ್ನು ಅಮಾಯಕರು ಎನ್ನುವುದು, ಇದು ಕಾಂಗ್ರೆಸ್ ನಾಯಕರ ವರಸೆ. ಪೊಲೀಸರ ಮೇಲೆಯೇ ದಾಳಿ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎಂದು ಹೇಳಲು ನೀವು (ಕಾಂಗ್ರೆಸ್) ಯಾರು’ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಹಿಂದೆ #ಮೀರ್‌ಸಾದಿಕ್ (ಸಿದ್ದರಾಮಯ್ಯ) ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ. ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ: 40 ಮಂದಿ ವಶಕ್ಕೆ, ಏ. 20ರವರೆಗೆ ನಿಷೇಧಾಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.