ಶುಕ್ರವಾರ, ಮೇ 20, 2022
25 °C

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿ ಕೆ.ಆರ್‌. ರಮೇಶ್‌ ಕುಮಾರ್‌ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಧಾನಮಂಡಲದ ಜಂಟಿ ಸ್ಥಾಯಿ ಸಮಿತಿಗಳು ಹಾಗೂ ವಿಧಾನಸಭೆಯ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸೋಮವಾರ ಆದೇಶ ಹೊರಡಿಸಿದ್ದು, ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಅವರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಜಂಟಿ ಸಮಿತಿಗಳ ಪೈಕಿ ಗ್ರಂಥಾಲಯ ಸಮಿತಿಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷರಾಗಿರುತ್ತಾರೆ. ವಿಧಾನಸಭೆಯ ಖಾಸಗಿ ಸದಸ್ಯರುಗಳ ವಿಧೇಯಕ ಮತ್ತು ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಮತ್ತು ವಸತಿ ಸೌಕರ್ಯ ಸಮಿತಿಗಳಿಗೆ ವಿಧಾನಸಭೆಯ ಉಪಾಧ್ಯಕ್ಷ ಆನಂದ ಮಾಮನಿ ಅಧ್ಯಕ್ಷರಾಗಿರುತ್ತಾರೆ.

ಇತರ ಜಂಟಿ ಸಮಿತಿಗಳ ಅಧ್ಯಕ್ಷರು: ಸಾರ್ವಜನಿಕ ಉದ್ದಿಮೆಗಳ ಸಮಿತಿ– ಜಿ.ಎಚ್‌. ತಿಪ್ಪಾರೆಡ್ಡಿ,; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ– ಎಂ.ಪಿ. ಕುಮಾರಸ್ವಾಮಿ; ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ– ಎಸ್‌. ಕುಮಾರ್‌ ಬಂಗಾರಪ್ಪ; ಅಧೀನ ಶಾಸನ ರಚನಾ ಸಮಿತಿ– ಎಲ್‌.ಎ. ರವಿ ಸುಬ್ರಹ್ಮಣ್ಯ; ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ– ಸಾ.ರಾ. ಮಹೇಶ್‌; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ– ಕೆ. ಪೂರ್ಣಿಮಾ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ ರಾಜ್‌ ಸಮಿತಿ– ಜಿ. ಸೋಮಶೇಖರ ರೆಡ್ಡಿ.

ವಿಧಾನಸಭೆಯ ಸಮಿತಿಗಳು: ಅಂದಾಜುಗಳ ಸಮಿತಿ– ಅಭಯ ಪಾಟೀಲ; ಸರ್ಕಾರಿ ಭರವಸೆಗಳ ಸಮಿತಿ– ಕೆ. ರಘುಪತಿ ಭಟ್‌; ಹಕ್ಕುಬಾಧ್ಯತೆಗಳ ಸಮಿತಿ– ಬಸನಗೌಡ ಆರ್‌. ಪಾಟೀಲ ಯತ್ನಾಳ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು