ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಎಂದರೆ ಬಿಜೆಪಿಗೆ 'ಲೂಟಿಭಾಗ್ಯ' ಸಿಕ್ಕಂತೆ: ಕಾಂಗ್ರೆಸ್‌

Last Updated 18 ಆಗಸ್ಟ್ 2021, 10:09 IST
ಅಕ್ಷರ ಗಾತ್ರ

ಬೆಂಗಳೂರು: ಲೂಟಿಗಾಗಿ ಮುನ್ನೆಚ್ಚರಿಕೆ ನಿರ್ಲಕ್ಷಿಸಿ 1ನೇ ಅಲೆ, 2ನೇ ಅಲೆಗಳನ್ನು ಬರಲು ಬಿಟ್ಟು ಜನರನ್ನು ಬಲಿ ಕೊಟ್ಟಿದೆ ಈ ಭ್ರಷ್ಟ ಸರ್ಕಾರ ಎಂದು ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

'ಕೊರೊನಾ ಎಂದರೆ ಬಿಜೆಪಿಗೆ 'ಲೂಟಿಭಾಗ್ಯ' ಸಿಕ್ಕಂತೆ!' ಎಂದಿರುವ ಕಾಂಗ್ರೆಸ್‌, ಕೋವಿಡ್‌ ಉಪಕರಣಗಳನ್ನು ಇತರ ರಾಜ್ಯಗಳಿಗಿಂತ ದುಪ್ಪಟ್ಟು ದರದಲ್ಲಿ ಖರೀದಿಸಿದ್ದೇಕೆ? ಎಂದು ಪ್ರಶ್ನಿಸಿದೆ.

ಪ್ರಜಾವಾಣಿ ವರದಿ, ಕೋವಿಡ್‌ ನಿಯಂತ್ರಣ ಉಪಕರಣ ಖರೀದಿ: ₹34.97 ಕೋಟಿ ಅಧಿಕ ವೆಚ್ಚ (ಬುಧವಾರ, ಆಗಸ್ಟ್‌ 18, 2021) ಉಲ್ಲೇಖಿಸಿರುವ ಕರ್ನಾಟಕ ಕಾಂಗ್ರೆಸ್‌, 'ಕೊರೊನಾ ಸೋಂಕಿನಲ್ಲೂ ಲೂಟಿ ನಡೆಸಲು ನಾಚಿಕೆ ಇಲ್ಲವೇ?' ಎಂದು ಬಿಜೆಪಿಯನ್ನು ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

'ರ್‍ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ಗಳ ಖರೀದಿಯಲ್ಲೂ ಲೋಪಗಳಾಗಿವೆ. ಇಲಾಖೆ ಖರೀದಿಸಿರುವ 30 ಲಕ್ಷ ಕಿಟ್‌ಗಳಿಗೆ ₹3.79 ಕೋಟಿ ಅಧಿಕ ಪಾವತಿ ಮಾಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ದೂರಿದೆ' ಎಂಬುದು ವರದಿಯಲ್ಲಿದೆ.

ಕೇರಳಕ್ಕೆ ಹೋಲಿಸಿದರೆ ದುಪ್ಪಟ್ಟು ದರ
ಹೆಮಟಾಲಜಿ ಸೆಲ್‌ ಕೌಂಟ್ಸ್‌(ಪಾರ್ಟ್‌5) ಅನ್ನು ಕರ್ನಾಟಕ ಸಿಸ್ಮೆಕ್‌ ಕಾರ್ಪೊರೇಷನ್‌ನಿಂದ ಪ್ರತಿ ಯೂನಿಟ್‌ಗೆ ₹8.35 ಲಕ್ಷ ನೀಡಿ 165 ಯೂನಿಟ್‌ಗಳನ್ನು ಖರೀದಿಸಿತ್ತು. ಇದೇ ವೈಶಿಷ್ಟ್ಯ ಹೊಂದಿರುವ ಸಾಮಗ್ರಿಗೆ ಕೇರಳ ಪ್ರತಿ ಯೂನಿಟ್‌ಗೆ ಕೇವಲ ₹4,60,200 ನೀಡಿದೆ. ಕೇರಳಕ್ಕೆ ಹೋಲಿಸಿದರೆ ₹6.18 ಕೋಟಿ ಅಧಿಕ ದರ ಪಾವತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT