ಬುಧವಾರ, ಡಿಸೆಂಬರ್ 8, 2021
23 °C

ಬಿಜೆಪಿಯ ಸ್ಮಾರ್ಟ್ ಸಿಟಿ ಯೋಜನೆ ಬಣ್ಣ ಮಳೆಯಲ್ಲಿ ತೊಳೆದು ಹೋಗಿದೆ: ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಸರ್ಕಾರದ ‘ಸ್ಮಾರ್ಟ್ ಸಿಟಿ’ ಎಂಬ ಯೋಜನೆ ಕೇವಲ ಕಣ್ಕಟ್ಟಿಗೆ ಸೀಮಿತವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರಿನ ರಸ್ತೆಗಳ ಬಗ್ಗೆ ‘ಪ್ರಜಾವಾಣಿ’ ಪ್ರಕಟಿಸಿದ್ದ ವಿಶೇಷ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಬಿಜೆಪಿಯ ‘ಸ್ಮಾರ್ಟ್ ಸಿಟಿ’ ಎಂಬ ಕಣ್ಕಟ್ಟು ಯೋಜನೆಯ ಬಣ್ಣ ಮಳೆಯಲ್ಲಿ ತೊಳೆದುಕೊಂಡು ಹೋಗಿದೆ. ಸ್ಮಾರ್ಟ್ ಸಿಟಿ ಹಗರಣದ ಬಗ್ಗೆ ಬಿಜೆಪಿ ನಾಯಕರ ಮೌನವು, ಗುತ್ತಿಗೆದಾರರ ಜತೆ ಆ ಪಕ್ಷದ ನಾಯಕರೂ ಕಮಿಷನ್ ನುಂಗಿರುವ ಸಂಶಯ ಸೃಷ್ಟಿಸಿದೆ. ಈವರೆಗೂ ‘ಸ್ಮಾರ್ಟ್ ರಸ್ತೆ’ಯ ಗುಂಡಿಗಳಿಗೆ ಬಿದ್ದ ₹191 ಕೋಟಿಗೆ ಹೊಣೆ ಯಾರು’ ಎಂದು ಟ್ವೀಟ್‌ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.

ಓದಿ: ಮಳೆಗೆ ಸ್ಮಾರ್ಟ್‌ ರಸ್ತೆಗಳ ಬಣ್ಣ ಬಯಲು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು