ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೋವಿಡ್ ಪ್ರಕರಣ ಗಣನೀಯ ಇಳಿಕೆ

24 ಗಂಟೆಗಳ ಅವಧಿಯಲ್ಲಿ 14,366 ಮಂದಿಗೆ ಸೋಂಕು ದೃಢ *60,914 ಮಂದಿ ಚೇತರಿಕೆ
Last Updated 1 ಫೆಬ್ರುವರಿ 2022, 16:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 14,366 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ಈ ಸಂಖ್ಯೆ ಕಳೆದ ತಿಂಗಳು 50 ಸಾವಿರದ ಗಡಿ ದಾಟಿತ್ತು. ವಾರದಿಂದ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ ಮಾಡಿದೆ. 2.25 ಲಕ್ಷಕ್ಕೆ ಏರಿಕೆ ಕಂಡಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆಯೂ ಇಳಿಕೆಯಾಗಿದೆ.ಒಂದು ದಿನದ ಅವಧಿಯಲ್ಲಿ 1.06 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣ ಶೇ 13.45 ರಷ್ಟಿದೆ.ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 38.23 ಲಕ್ಷಕ್ಕೆ ಏರಿಕೆಯಾಗಿದೆ.

21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರು ಅಂಕಿ, ಏಳು ಜಿಲ್ಲೆಗಳಲ್ಲಿ ಎರಡು ಅಂಕಿಯಲ್ಲಿ ಇದೆ.ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, 6,685 ಮಂದಿ ಸೋಂಕಿತರಾಗಿದ್ದಾರೆ. ಬೆಳಗಾವಿಯಲ್ಲಿ 1,081, ಮೈಸೂರಿನಲ್ಲಿ 777, ಧಾರವಾಡದಲ್ಲಿ 633, ತುಮಕೂರಿನಲ್ಲಿ 573 ಹಾಗೂ ಉತ್ತರ ಕನ್ನಡದಲ್ಲಿ 551 ಮಂದಿಕೋವಿಡ್ ಪೀಡಿತರಾಗಿದ್ದಾರೆ.ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 500ಕ್ಕಿಂತ ಕಡಿಮೆ ಇವೆ.

ಸೋಂಕಿತರಲ್ಲಿ ಬೆಂಗಳೂರಿನಲ್ಲಿ 35,589 ಮಂದಿ ಸೇರಿದಂತೆ ರಾಜ್ಯದಲ್ಲಿ 60,914 ಮಂದಿ ಚೇತರಿಸಿಕೊಂಡಿದ್ದಾರೆ.ರಾಜ್ಯದಲ್ಲಿ ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 35.87 ಲಕ್ಷಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.97 ಲಕ್ಷಕ್ಕೆಇಳಿಕೆಯಾಗಿದೆ. ಬೆಂಗಳೂರಿನಲ್ಲಿ 1.05 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಕೊರೊನಾ ಸೋಂಕಿತರಲ್ಲಿ 58 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.ಬೆಂಗಳೂರಿನಲ್ಲಿ ಒಂಬತ್ತು ಮಂದಿ, ಮೈಸೂರು ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಏಳು ಮಂದಿ, ಮಂಡ್ಯದಲ್ಲಿ ಐವರು, ಉಡುಪಿಯಲ್ಲಿ ನಾಲ್ವರು, ಶಿವಮೊಗ್ಗದಲ್ಲಿ ಮೂವರು, ಬಾಗಲಕೋಟೆ, ದಾವಣಗೆರೆ, ಹಾಸನ, ಕಲಬುರಗಿ, ಕೋಲಾರ, ರಾಯಚೂರು ಹಾಗೂ ರಾಮನಗರದಲ್ಲಿತಲಾ ಇಬ್ಬರುಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿಮರಣಪ್ರಮಾಣ ದರವು ಶೇ 0.40ಕ್ಕೆ ಏರಿಕೆಯಾಗಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 39,056ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT