ಬುಧವಾರ, ಮೇ 12, 2021
26 °C
ಕಂದಾಯ ಸಚಿವ ಆರ್‌. ಅಶೋಕ ಎಚ್ಚರಿಕೆ

ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ: ಕಂದಾಯ ಸಚಿವ ಆರ್‌. ಅಶೋಕ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ಫ್ಯೂ ಅವಧಿಯಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸದೇ ಇದ್ದರೆ, ಇನ್ನೂ ಕಠಿಣ ನಿಯಮಗಳನ್ನು ಜಾರಿ ಮಾಡುವುದು ಅನಿವಾರ್ಯ ಎಂದು ಕಂದಾಯ ಸಚಿವ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಸೋಂಕಿನ ಸರಪಳಿ ಮುರಿಯಲು ಸಾರ್ವಜನಿಕರು ಮನೆಯಲ್ಲೇ ಇರಬೇಕು. ಅನಿವಾರ್ಯ ಇದ್ದರಷ್ಟೇ ಹೊರಗೆ ಬರಬೇಕು. 14 ದಿನಗಳಲ್ಲಿ ಸೋಂಕು ಸರಪಳಿ ಮುರಿದರೆ ಮುಂದೆ ಕಠಿಣ ಕ್ರಮಗಳ ಜಾರಿಯಿಂದ ತಪ್ಪಿಸಲುಕೊಳ್ಳಲು ಸಾಧ್ಯ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಎರಡು ತಿಂಗಳು ಹೆಚ್ಚು ಜಾಗ್ರತೆ ವಹಿಸಿ, ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸ
ಬೇಕಾಗಿದೆ.

ಮಹಾರಾಷ್ಟ್ರ ಮತ್ತು ದೆಹಲಿ ಯಲ್ಲಿ ಕೋವಿಡ್‌ ತಾರಕಕ್ಕೆ ಏರಿದೆ. ಅಲ್ಲಿ ರೀತಿ ಇಲ್ಲಿ ಉಲ್ಬಣ ಆಗಬಾರದು ಎಂದು ಅವರು ತಿಳಿಸಿದರು.

ಕರ್ಫ್ಯೂ ಸಹಕಾರಿ:  ಮೇ 4 ರವರೆಗಿನ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಬಂದ್‌ನಿಂದ ಕೊರೊನಾ ಸೋಂಕಿನ ಸರಪಳಿ ಮುರಿಯಲು ಸಾಧ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ತಾಂತ್ರಿಕ ಸಲಹಾ ಸಮಿತಿಯ ತಜ್ಞರು ವೈಜ್ಞಾನಿಕ ಆಧಾರದ ಮೇಲೆ ನೀಡಿರುವ ಸಲಹೆಗಳ ಮೇರೆಗೆ ಮಾರ್ಗಸೂಚಿ ರೂಪಿಸಲಾಗಿದೆ. ಸಾರ್ವಜನಿಕರು ಇದನ್ನು   ಕಟ್ಟುನಿಟ್ಟಾಗಿ ಪಾಲಿಸಿದರೆ, ಮುಂದಿನ ಮೂರು–ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು