ಮಂಗಳವಾರ, ಅಕ್ಟೋಬರ್ 20, 2020
26 °C

ಕೊರೊನಾ: ಕಚೇರಿಯಲ್ಲಿಯೂ ಇರಲಿ ಎಚ್ಚರ, ಏನೇನು ಮುನ್ನೆಚ್ಚರಿಕೆ ಕೈಗೊಳ್ಳಬಹುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರುಗತಿ ಪಡೆದಿರುವ ಪರಿಣಾಮ ಕಚೇರಿಗಳಲ್ಲಿಯೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಹಲವು ಉದ್ಯೋಗಿಗಳಿಗೆ ಈಗಾಗಲೇ ಮನೆಯಿಂದಲೇ ಕೆಲಸ ನಿರ್ವಹಿಸಲು ಕಂಪನಿಗಳು ಅವಕಾಶ ನೀಡಿವೆ. ಆದರೆ,  ಕೆಲಸಗಳು ಸುಗಮವಾಗಿ ಸಾಗಲು ಬೇಕಾದ ಕನಿಷ್ಠ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಚೇರಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಲಾಖೆ ಕೆಲವು ಸೂಚನೆ ನೀಡಿದೆ. 

 - ಏಕಕಾಲಕ್ಕೆ ಇಬ್ಬರಿಗಿಂತ ಹೆಚ್ಚು ಜನ ಲಿಫ್ಟ್ ಬಳಸಬಾರದು. 

 - ಲಿಫ್ಟ್‌ನಲ್ಲಿ, ಕಚೇರಿ ಒಳಗೆ ಅಂತರ ಕಾಯ್ದುಕೊಳ್ಳಬೇಕು 

 - ನಿರ್ದಿಷ್ಟ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಬೇಕು 

 - ಊಟ–ಉಪಾಹಾರದ ವೇಳೆಯೂ ಹೆಚ್ಚು ಜನ ಸೇರಬಾರದು 

- ಹಸ್ತಲಾಘವ ಮಾಡಬಾರದು 

 - ಶೌಚಾಲಯ, ಕುಡಿಯುವ ನೀರಿನ ಸ್ಥಳ ಮತ್ತಿತರ ಅಗತ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು 

 - ಮೊಬೈಲ್‌, ಮೌಸ್‌ನಂತಹ ಉಪಕರಣವನ್ನು ಸೋಂಕು ನಿವಾರಕದಿಂದ ಸ್ವಚ್ಛಪಡಿಸಿಕೊಳ್ಳುತ್ತಿರಬೇಕು 

 - ಎ.ಸಿಗಳನ್ನು ಆದಷ್ಟು ಕಡಿಮೆ ಬಳಸಬೇಕು. ಶುದ್ಧ ಗಾಳಿ ಹರಿದಾಡಲು ವ್ಯವಸ್ಥೆ ಮಾಡಬೇಕು 

 - ಶೌಚಾಲಯದ ನಲ್ಲಿಗಳು, ಲಿಫ್ಟ್‌ ಬಟನ್‌ ಮತ್ತಿತರ ಜಾಗಗಳಲ್ಲಿ ಆಗಾಗ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು 

 - ಕಚೇರಿಯ ಒಳಗೆ ತರುವ ಸರಕುಗಳನ್ನು ಸ್ಯಾನಿಟೈಸ್‌ ಮಾಡಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು