ಗುರುವಾರ , ಅಕ್ಟೋಬರ್ 22, 2020
22 °C

ಡಿಕೆಶಿ ಅಂತರಂಗ ಅವರಿಗೇ ಗೊತ್ತು: ಸಿ.ಟಿ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ‘ಮಾತಿನಿಂದ ಜಗತ್ತನ್ನು ಮೆಚ್ಚಿಸಬಹುದು. ಆದರೆ, ನಮಗೆ ನಾವು ಸುಳ್ಳು ಹೇಳಿಕೊಳ್ಳಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ‍ಅವರ ಅಂತರಂಗ ಅವರಿಗೇ ಗೊತ್ತು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದರು.

‘ತತ್ವಜ್ಞಾನಿಯೋ ಅಥವಾ ಇನ್ನೇನೋ ಎಂಬುದನ್ನು ಸಚಿವ ರವಿ ನಿರ್ಧರಿಸಲಿ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದರು. ಅವರು ತಾಲ್ಲೂಕಿನ ಜೋಡಿಹೋಚಿಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 

‘ಹೊರಜಗತ್ತಿಗೆ ಸುಳ್ಳು ಹೇಳಿದರೂ ನಮ್ಮೊಳಗಿನ ಚೈತನ್ಯಕ್ಕೆ ಸುಳ್ಳು ಹೇಳಲಾಗದು. ದೇಹದೊಳಗಿನ ಭಗವಂತನನ್ನು ಮೆಚ್ಚಿಸಲು ಸುಳ್ಳಿನಿಂದ ಸಾಧ್ಯವಿಲ್ಲ. ನಮ್ಮೊಳಗಿನ ಚೈತನ್ಯ ಸದಾ ಎಚ್ಚರಿಸುತ್ತಿರುತ್ತದೆ. ಡಿ.ಕೆ.ಶಿವಕುಮಾರ್ ಯಾರೆಂದು ಅವರೇ ನಿರ್ಧರಿಸಲಿ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು