ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗೆ ಅ. 3ರಿಂದ ದಸರಾ ರಜೆ

Last Updated 30 ಸೆಪ್ಟೆಂಬರ್ 2022, 2:54 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಟೋಬರ್ 3ರಿಂದ 7ರವರೆಗೆ ಹೈಕೋರ್ಟ್‌ ದಸರಾ ರಜೆ ನೀಡಲಾಗಿದೆ. ಅಕ್ಟೋಬರ್‌ 6 ರಂದು ರಜಾಕಾಲೀನ ಪೀಠಗಳು ಕಾರ್ಯ ನಿರ್ವಹಿಸಲಿವೆ.

ನ್ಯಾಯಮೂರ್ತಿಗಳಾದ ಎಸ್. ಸುನೀಲ್ ದತ್ ಯಾದವ್ ಮತ್ತು ಟಿ.ಜಿ. ಶಿವಶಂಕರೇಗೌಡ ಅವರ ವಿಭಾಗೀಯ ನ್ಯಾಯಪೀಠವು 8ನೇ ಕೋರ್ಟ್ ಹಾಲ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಏಕಸದಸ್ಯ ನ್ಯಾಯಪೀಠಗಳಲ್ಲಿ, ನ್ಯಾಯಮೂರ್ತಿ ಎನ್. ಎಸ್. ಸಂಜಯ್ ಗೌಡ ಕೋರ್ಟ್ ಹಾಲ್ ಸಂಖ್ಯೆ 9, ಎಂ. ಜಿ. ಎಸ್. ಕಮಲ್ ಕೋರ್ಟ್ ಹಾಲ್ 10 ಮತ್ತು ಸಿ.ಎಂ.ಪೂಣಚ್ಚ ಕೋರ್ಟ್ ಹಾಲ್ 11ರಲ್ಲಿ ಕಲಾಪ ನಡೆಸಲಿದ್ದಾರೆ.

ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಭೌತಿಕ ವಿಚಾರಣೆ ಇರುವು ದಿಲ್ಲ. ತುರ್ತು ಪ್ರಕರಣಗಳ ವಿಚಾರಣೆ
ಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುವಲ್ ವಿಧಾನದಲ್ಲಿ ನಡೆಸಲಾಗುತ್ತದೆ. ಬೆಂಗಳೂರು ಪೀಠದಲ್ಲಿ ಹೈಬ್ರಿಡ್ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ.

‘ತುರ್ತು ಮಧ್ಯಂತರ ಆದೇಶ, ತಡೆಯಾಜ್ಞೆ ಮತ್ತು ಮಧ್ಯಂತರ ನಿರ್ದೇಶನಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರವೇ ರಜಾಕಾಲದ ನ್ಯಾಯ ಪೀಠಗಳು ವಿಚಾರಣೆ ನಡೆಸುತ್ತವೆ’ ಎಂದು ಪ್ರಭಾರ ನ್ಯಾಯಾಂಗ ರಿಜಿಸ್ಟ್ರಾರ್ ಕೆ. ಎಸ್. ಭರತ್ ಕುಮಾರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಹೊಸ ರಿಜಿಸ್ಟ್ರಾರ್ ಜನರಲ್

ಬೆಂಗಳೂರು: ಜಿಲ್ಲಾ ನ್ಯಾಯಾಧೀಶ ಬಿ.ಮುರಳೀಧರ ಪೈ ಅವರಿಗೆ ಖಾಲಿ ಇದ್ದ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಹುದ್ದೆಗೆ ಪದೋನ್ನತಿ ನೀಡಲಾಗಿದೆ.

ಈ ಹಿಂದೆ ರಿಜಿಸ್ಟ್ರಾರ್‌ ಜನರಲ್‌ ಆಗಿದ್ದ ಟಿ.ಜಿ.ಶಿವಶಂಕರೇಗೌಡ ಹೈಕೋರ್ಟ್‌ ಹಂಗಾಮಿ ನ್ಯಾಯಮೂರ್ತಿಯಾಗಿ ಪದನ್ನೋತಿ ಹೊಂದಿದ ಹಿನ್ನೆಲೆಯಲ್ಲಿ ಈ ಹುದ್ದೆ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT