ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನ್ಮಾರ್ಕ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಕುಡ್ಲದ ಜ್ಯೋತ್ಸ್ನಾ

Last Updated 25 ಫೆಬ್ರವರಿ 2023, 4:40 IST
ಅಕ್ಷರ ಗಾತ್ರ

ಮಂಗಳೂರು: ಡೆನ್ಮಾರ್ಕ್‌ನ ಅತಿ ಪ್ರತಿಭಾವಂತ ಯುವ ಸಲಹೆಗಾರ ಪ್ರಶಸ್ತಿಯ ಅಂತಿಮ ಹಂತಕ್ಕೆ ಆಯ್ಕೆಯಾಗಿರುವ ಐವರು ಸ್ಪರ್ಧಿಗಳಲ್ಲಿ ಮಂಗಳೂರಿನ ಜ್ಯೋತ್ಸ್ನಾ ಅಮೃತ್ ಕೂಡ ಒಬ್ಬರಾಗಿದ್ದಾರೆ.

ಡೆನ್ಮಾರ್ಕ್‌ನ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್–ಎಫ್‌ಐಆರ್‌ ಸಂಸ್ಥೆಯು ಮಾ.2ರಂದು ಅಂತಿಮವಾಗಿ ಒಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.

ಕೋಪನ್‌ಹೇಗನ್ ರೈಲ್ವೆ ವಿಭಾಗದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಜ್ಯೋತ್ಸ್ನಾ ಅವರು ಹಲವಾರು ರೈಲ್ವೆ ಯೋಜನೆಗಳಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿ ಗಮನ ಸೆಳೆದಿದ್ದಾರೆ. ‘ಜಕಾರ್ತಾ ಮಾಸ್ ರ್‍ಯಾ‍ಪಿಡ್ ಟ್ರಾನ್ಸಿಟ್’ ರೈಲು ಯೋಜನೆಯಲ್ಲಿ ಅವರು ಮಾಡಿರುವ ಸಾಧನೆ ಗಮನಿಸಿ, ಅಂತಿಮ ಸುತ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಿದ್ದ ದಿಶಾ ಅಮೃತ್ ಅವರ ಸಹೋದರಿ ಜ್ಯೋತ್ಸ್ನಾ, ಮೂಲತಃ ಮಂಗಳೂರಿನ ಬೋಳೂರು ತಿಲಕನಗರದವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT