ಬುಧವಾರ, ಸೆಪ್ಟೆಂಬರ್ 22, 2021
22 °C

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 30 ಜಿಲ್ಲೆಗಳಿಗೆ ವಿವಿಧ ಇಲಾಖೆಗಳ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ.

ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ ಉಸ್ತುವಾರಿ ಕಾರ್ಯದರ್ಶಿಯನ್ನು ನೇಮಿಸಿಲ್ಲ. ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಶೀಲನೆ, ಅಹವಾಲು ವಿಚಾರಣೆ, ದಿಢೀರ್‌ ಪರಿಶೀಲನೆ ಮತ್ತು ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರವನ್ನು ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ.

ವಿವರ: ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ (ಮಂಡ್ಯ), ಬಿ.ಬಿ. ಕಾವೇರಿ (ಚಾಮರಾಜನಗರ), ನವೀನ್‌ ರಾಜ್‌ ಸಿಂಗ್‌ (ಹಾಸನ), ವಿ. ಅನ್ಬುಕುಮಾರ್‌ (ಕೊಡಗು), ಸಿ. ಶಿಖಾ (ಚಿಕ್ಕಮಗಳೂರು), ಕ್ಯಾಪ್ಟನ್‌ ಮಣಿವಣ್ಣನ್‌ ಪಿ. (ಉಡುಪಿ), ವಿ. ಪೊನ್ನುರಾಜ್‌ (ದಕ್ಷಿಣ ಕನ್ನಡ), ರಾಕೇಶ್ ಸಿಂಗ್‌ (ತುಮಕೂರು), ಡಾ.ರವಿಕುಮಾರ್‌ ಸುರ್‌ಪುರ್‌ (ಧಾರವಾಡ). ಮೊಹಮ್ಮದ್ ಮೊಹಿಸಿನ್‌ (ಗದಗ), ಡಿ. ರಂದೀಪ್‌ (ವಿಜಯಪುರ), ಕೆ.ಪಿ. ಮೋಹನ್‌ ರಾಜ್‌ (ಉತ್ತರ ಕನ್ನಡ), ಶಿವಯೋಗಿ ಸಿ. ಕಳಸದ (ಬಾಗಲಕೋಟೆ), ಗುಂಜನ್‌ ಕೃಷ್ಣ (ಕಲಬುರ್ಗಿ), ಮುನೀಶ್ ಮೌದ್ಗಿಲ್‌ (ಯಾದಗಿರಿ), ಡಾ. ವಿಶಾಲ್‌ ಆರ್‌. (ರಾಯಚೂರು), ಡಾ. ರಶ್ಮಿ ವಿ. ಮಹೇಶ್ (ಕೊಪ್ಪಳ), ಡಾ.ಎಂ.ಎನ್‌. ಅಜಯ್‌ ನಾಗಭೂಷಣ್‌ (ಬಳ್ಳಾರಿ), ರಿಚರ್ಡ್‌ ವಿನ್ಸೆಂಟ್‌ ಡಿಸೋಜ (ಬೀದರ್‌), ಮನೋಜ್‌ ಜೈನ್‌ (ಹಾವೇರಿ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು