ಬುಧವಾರ, ಜುಲೈ 6, 2022
22 °C

ಎಂಜಿನಿಯರಿಂಗ್‌: ಸಂಜೆ ಕಾಲೇಜು ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಎಲ್ಲ ಸಂಜೆ ಎಂಜಿನಿ ಯರಿಂಗ್‌ ಕಾಲೇಜುಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮುಚ್ಚ ಲಾಗಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಸೂಚನೆ ಯಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ರೀತಿ ಮುಚ್ಚಿದ ಕಾಲೇಜು ಗಳನ್ನು ರೆಗ್ಯುಲರ್‌ ಎಂಜಿನಿಯರಿಂಗ್‌ ಕಾಲೇಜುಗಳ ಜೊತೆ ಸಂಯೋಜಿ ಸಲಾಗಿದೆ. ಆದರೆ, ಲ್ಯಾಟರಲ್‌ ಎಂಟ್ರಿ (ಡಿಪ್ಲೊಮಾ ಓದಿದವರು) ಮೂಲಕ ಮೂರು ವರ್ಷದ ಎಂಜಿನಿಯರಿಂಗ್‌ ಕೋರ್ಸ್‌ಗೆ ದಾಖಲಾಗಿ 5,6,7 ಮತ್ತು 8ನೇ ಸೆಮಿಸ್ಟರ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಂಜೆ ಎಂಜಿನಿಯರಿಂಗ್‌ ಕಾಲೇಜುಗಳು ಮುಂದುವರಿಯಲಿದೆ.

ರಾಜ್ಯದಾದ್ಯಂತ ‌ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿ ಒಟ್ಟು 12 ಸಂಜೆ ಎಂಜಿನಿಯರಿಂಗ್‌ ಕಾಲೇಜು ಗಳಿವೆ. ಎಸ್ಸೆಸ್ಸೆಲ್ಸಿಯ ಬಳಿಕ ಮೂರು ವರ್ಷದ ಡಿಪ್ಲೊಮಾ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಗಲು ವೇಳೆ ಕೆಲಸ ಮಾಡಿ, ಸಂಜೆ ಎಂಜಿನಿಯರಿಂಗ್‌ ಕಾಲೇಜುಗಳಿಗೆ ದಾಖಲಾಗಿ ಎಂಜಿನಿ ಯರಿಂಗ್‌ ಪದವಿ ಪಡೆಯುತ್ತಿದ್ದರು. ಅಂಥವರಿಗೆ, ಎಐಸಿಟಿಇ ಈ ಕ್ರಮದಿಂದ ಸಮಸ್ಯೆ ಆಗಲಿದೆ.ಕೆಲಸದ ಒತ್ತಡದ ನಡುವೆಯೇ ಎಂಜಿನಿಯರಿಂಗ್‌ ಪದವಿ ಓದುವುದು ಸುಲಭವಲ್ಲ. ಇದು ಶಿಕ್ಷಣ ಗುಣಮಟ್ಟದ ಮೇಲೆಯೂ ತೀವ್ರ ಪರಿ ಣಾಮ ಉಂಟಾಗುತ್ತಿದೆ. ಅಲ್ಲದೆ, ಈ ಕಾಲೇಜುಗಳ ನಿರ್ವಹಣೆ ಕೂಡಾ ವೆಚ್ಚ ದಾಯಕ. ಈ ಕಾರಣ ನೀಡಿ ಪ್ರಸಕ್ತ ಸಾಲಿ
ನಿಂದ ಎಂಜಿನಿಯರಿಂಗ್‌ ಕಾಲೇಜು ಗಳನ್ನು ಬಂದ್‌ ಮಾಡಲು ಎಐಸಿಟಿಇ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು